2015ಕ್ಕೆ ಶೋರೂಂ ದ್ವಿಗುಣಗೊಳಿಸಲು ಮಾರುತಿ ನಿರ್ಧಾರ

Maruti Panning To Double Showrooms By 2015
ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಮಾರಾಟ ಹೆಚ್ಚಿಸಿಕೊಳ್ಳಲು ಹಲವು ಕಾರ್ಯತಂತ್ರ ರೂಪಿಸಿದೆ. ಜೊತೆಗೆ ತನ್ನ ಎದುರಾಳಿ ಕಂಪನಿಗಳಿಗೆ ಸಮರ್ಥ ಪೈಪೋಟಿ ನೀಡುವ ಇರಾದೆ ಕಂಪನಿಯದ್ದು. 2015ರ ವೇಳೆಗೆ ಮಾರಾಟಾ ಜಾಲ ಅಂದರೆ ಶೋರೂಂಗಳ ಸಂಖ್ಯೆಯನ್ನು ಎರಡುಪಟ್ಟು ಹೆಚ್ಚಿಸಲು ನಿರ್ಧರಿಸಿರುವುದಾಗಿ ಮಾರುತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರುತಿ ಸುಜುಕಿ ತನ್ನ 1 ಸಾವಿರನೇ ಶೋರೂಂನ್ನು ಸೂರತ್ ನಲ್ಲಿ ಆರಂಭಿಸಿದೆ. ಕಂಪನಿಯು ಸಣ್ಣ ಮತ್ತು ಅತಿಸಣ್ಣ ಪಟ್ಟಣಗಳಲ್ಲೂ ಶೋರೂಂ ತೆರೆಯುವ ಯೋಜನೆ ಹೊಂದಿದೆ. ಒಟ್ಟಾರೆ ಮಾರಾಟ ಹೆಚ್ಚಿಸುವುದು ಕಂಪನಿಯ ಉದ್ದೇಶ.

"ಮಾರಾಟ ಜಾಲ ಹೆಚ್ಚಿಸುವುದು ಕಂಪನಿಯ ಮಾರಾಟ ಹೆಚ್ಚಿಸುವ ಕಾರ್ಯತಂತ್ರ. ಅದಕ್ಕೆ ಗಮನ ನೀಡುವುದನ್ನು ಇನ್ನೂ ಮುಂದುವರೆಸಲಿದ್ದೇವೆ. ಮುಂದಿನ ಕೆಲವೇ ವರ್ಷಗಳಲ್ಲಿ ನಮ್ಮ ಮಾರಾಟ ಜಾಲ ಎರಡು ಪಟ್ಟು ಹೆಚ್ಚಿಸಿಕೊಳ್ಳಲಿದ್ದೇವೆ" ಎಂದು ಮಾರುತಿ ಸುಜುಕಿ ಸಿಇಒ ಶಿಂಜೊ ನಕನಿಶಿ ಹೇಳಿದ್ದಾರೆ.

ಮಾರುತಿ ಸುಜುಕಿ "ನವ್ ನಿರ್ಮಾಣ್" ಹೆಸರಿನಲ್ಲಿ ತನ್ನ ಶೋರೂಂಗಳನ್ನು ಅಪ್ ಗ್ರೇಡ್ ಮಾಡಲಿದೆ. ದೇಶದ ಎಲ್ಲಾ ಶೋರೂಂಗಳು ಗ್ರಾಹಕರಿಗೆ ಒಂದೇ ರೀತಿಯ ಖರೀದಿ ಅನುಭವ ನೀಡುವಂತೆ ಮಾಡುವುದು ಕಂಪನಿಯ ಗುರಿ. ಕಂಪನಿ ಸದ್ಯ ಮಾನೆಸರ್ ಘಟಕದಲ್ಲಿ ನೌಕರರ ಪ್ರತಿಭಟನೆಯಿಂದ ಉತ್ಪಾದನೆಯಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ.

More from DriveSpark

Article Published On: Saturday, October 1, 2011, 11:17 [IST]
English summary
Maruti Suzuki India, the country's largest carmaker by sales is planning to consolidate its position in the face of increasing competition. Maruti Suzuki in a statement yesterday has announced plans to double its sales network and showrooms by 2015. The focus will be on small towns and cities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+