ಹ್ಯುಂಡೈ ಸೆಪ್ಟೆಂಬರ್ ಮಾರಾಟ ಶೇ. 13.2ರಷ್ಟು ಹೆಚ್ಚಳ

Hyundai September 2011 sales up 13.2pc
ದೇಶದ ಎರಡನೇ ಬೃಹತ್ ಕಾರು ತಯಾರಿಕಾ ಕಂಪನಿ ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್(ಎಚ್ ಎಂಐಎಲ್) ಸೆಪ್ಟೆಂಬರ್ ಮಾರಾಟ ಗಮನಾರ್ಹವಾಗಿ ಏರಿಕೆ ಕಂಡಿದೆ. ಕಂಪನಿಯು ಕಳೆದ ತಿಂಗಳು 57,808 ಕಾರು ಮಾರಾಟ ಮಾಡಿ ಶೇಕಡ 13.2ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಕಂಪನಿಯ ಕಾರು ಮಾರಾಟ 51,444 ಯುನಿಟ್ ಆಗಿತ್ತು.

ಕಳೆದ ತಿಂಗಳು ಕಂಪನಿಯ ದೇಶಿ ವಾಹನ ಮಾರಾಟ 35,955 ಯುನಿಟ್ ತಲುಪಿದೆ. ಕಳದೆ ವರ್ಷದ ಸೆಪ್ಟಂಬರ್ ತಿಂಗಳ 31,956 ಯುನಿಟ್ ದೇಶಿಯ ಮಾರಾಟಕ್ಕೆ ಹೋಲಿಸಿದರೆ ಶೇಕಡ 13.2ರಷ್ಟು ಏರಿಕೆ ದಾಖಲಿಸಿದೆ. ಇದೇ ಸಮಯದಲ್ಲಿ ಕಂಪನಿಯ ಕಾರು ರಫ್ತು 21,856 ಯುನಿಟ್ ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯ 19,688 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ರಫ್ತು ಶೇಕಡ 11ರಷ್ಟು ಹೆಚ್ಚಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಕಂಪನಿಯ 49,552 ಯುನಿಟ್ ಎ2 ಸೆಗ್ಮೆಂಟ್(ಸ್ಯಾಂಟ್ರೊ, ಐ10, ಐ20 ಇತ್ಯಾದಿ) ಕಾರುಗಳು ಮಾರಾಟವಾಗಿವೆ. 8,051 ಯುನಿಟ್ ಎ3 ಸೆಗ್ಮೆಂಟ್ ಗಳಾದ ಅಸೆಂಟ್ ಮತ್ತು ವೆರ್ನಾ ಕಾರುಗಳು ಮಾರಾಟವಾಗಿವೆ. ಎ5 ಸೆಗ್ಮೆಂಟ್ ಕಾರಾದ ಸೊನಾಟ ಟ್ರಾನ್ಸ್ ಫಾರ್ಮ್ 7 ಯುನಿಟ್ ಮಾರಾಟವಾಗಿದೆ. ಸಾಂಟಾ ಫೆ ಸ್ಪೋರ್ಟ್ಸ್ ಕಾರು 198 ಯುನಿಟ್ ಮಾರಾಟವಾಗಿದೆ.

More from DriveSpark

Article Published On: Monday, October 3, 2011, 12:21 [IST]
English summary
Hyundai Motor India Ltd reported 12.4% increase in total sales to 57,808 units in September 2011. In the A2 segment Santro, i10 and i20 the company sold 49,552 units, in the A3 segment (Accent and Verna), sales stood at 8,051 units.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+