ಹಬ್ಬದ ಸೀಸನ್: ಹೋಂಡಾ ಸಿಟಿ ಭಾರಿ ಡಿಸ್ಕೌಂಟ್

ಮುಂದಿನ ತಿಂಗಳು ಫೇಸ್ ಲಿಫ್ಟ್ ಮಾಡಿದ ಸಿಟಿ ಕಾರುಗಳು ರಸ್ತೆಗಿಳಿಯಲಿದೆ. ಹೀಗಾಗಿ ಹೆಚ್ಚಿನ ಗ್ರಾಹಕರಿಗೆ ಸಂದಿಗ್ಧತೆಯಿದೆ. ಪ್ರಸಕ್ತ ಸಿಟಿ ಕಾರು ಖರೀದಿಸಬೇಕೆ? ಅಥವಾ ಫೇಸ್ ಲಿಫ್ಟ್ ಸಿಟಿ ಕಾರಿಗೆ ಕಾಯಬೇಕೆ? ಇಂತಹ ಗೊಂದಲದಲ್ಲಿ ಜನರಿದ್ದಾರೆ.
ಸದ್ಯ ಡಿಸ್ಕೌಂಟ್ ಇರುವುದರಿಂದ ಸಿಟಿ ಕಾರು ಈಗಲೇ ಖರೀದಿಸುವುದು ಸೂಕ್ತ. ಹೊಸ ಆವೃತ್ತಿ ದರ ಎಷ್ಟಿರಲಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಹೊಸ ಫೇಸ್ ಲಿಫ್ಟ್ ಸಿಟಿ ಕಾರಿನಲ್ಲಿ 1.5 ಲೀಟರಿನ i-VTEC ಪೆಟ್ರೋಲ್ ಎಂಜಿನ್ ಇರಲಿದೆ. ಅಂದರೆ ಹಳೆಯ ಎಂಜಿನ್ ಇರಲಿದೆ.
ವಿನ್ಯಾಸ ಹೊರತುಪಡಿಸಿ ಹೆಚ್ಚಿನ ಬದಲಾವಣೆ ಇಲ್ಲದ ಕಾರಣ ಸದ್ಯ ಮಾರುಕಟ್ಟೆಯಲ್ಲಿರುವ ಸಿಟಿ ಕಾರು ಖರೀದಿಸಬಹುದು ಎಂದು ವಾಹನ ವಿಶ್ಲೇಷಕರು ಹೇಳುತ್ತಾರೆ. ಹೊಸ ಫೇಸ್ ಲಿಫ್ಟ್ ಸಿಟಿ ಕಾರಲ್ಲಿ ಯಾವುದೇ ಹೊಸ ಫೀಚರುಗಳು ಇರುವ ಕುರಿತು ನಿರೀಕ್ಷೆಯಿಲ್ಲ.
ಇದಕ್ಕೂ ಮುನ್ನ ಸಿಟಿ ಕಾರುಗಳ ದರ ಕಡಿಮೆಯಾಗಿತ್ತು. ಹೋಂಡಾ ಡೀಲರುಗಳು ಸುಮಾರು 70 ಸಾವಿರ ರು. ವಿನಾಯಿತಿ ಪ್ರಕಟಿಸಿದ್ದಾರೆ. ಈಗ ಸುಮಾರು 7.49 ಲಕ್ಷ ರು.ಗೆ ದೊರಕಲಿದೆ. ಖಂಡಿತಾ ಇದು ವ್ಯಾಲು ಫಾರ್ ಮನಿ. ಸಿಟಿ ಕಾರು ಇಷ್ಟವಾದರೆ ಖರೀದಿಸಬಹುದು. ಅಥವಾ ಫೇಸ್ ಲಿಫ್ಟ್ ಕಾರಿಗೆ ಕಾಯಬಹುದು.


Click it and Unblock the Notifications








