ದೇಶಿ ಕಾರು ಕಂಪನಿಗಳಿಗೆ ವಿದೇಶಿ ರೂಪದರ್ಶಿಗಳ ಮೋಹ

ಆಡಿ ಎ8ಎಲ್ ಮತ್ತು ಆಡಿ ಎ6 ಅನಾವರಣಗೊಂಡ ಸಂದರ್ಭದಲ್ಲಿ ವಿದೇಶಿ ಪುರುಷ ರೂಪದರ್ಶಿಗಳನ್ನು ಆಡಿ ಬಳಸಿತ್ತು. ಹ್ಯುಂಡೈ ವೆರ್ನಾ ಜಾಹೀರಾತಿನಲ್ಲೂ ವಿದೇಶಿ ರೂಪದರ್ಶಿ ಬಳಕೆಯಾಗಿದ್ದಾರೆ. ಟಾಟಾ ಮೋಟರ್ಸ್ ಆರಿಯಾ ಕಾರು ಬಿಡುಗಡೆಗೂ ವಿದೇಶಿ ಫಿಗರ್ ಬಳಸಲಾಗಿದೆ. ಹೆಚ್ಚಿನ ಕಾರು ಬಿಡುಗಡೆ ಫೋಟೊ ನೋಡಿ. ಅಲ್ಲಿ ಇರೋದೆಲ್ಲ ವಿದೇಶಿ ರೂಪದರ್ಶಿಯರೇ.
ಯಾಕೆ ಈ ಕಂಪನಿಗಳು ವಿದೇಶಿ ರೂಪದರ್ಶಿಯರನ್ನು ಬಳಸಿಕೊಳ್ಳುತ್ತಾರೆ? ಇದರ ಹಿಂದೆ ಏನಾದರೂ ಸೂಕ್ಷ್ಮತೆಗಳಿವೆಯೇ ಅಂತ ಹಲವು ವಾಹನ ಕಂಪನಿಗಳನ್ನು ವಿಚಾರಿಸಿದಾಗ "ಹೌದು ವಿದೇಶಿ ಮಾಡೆಲ್ ಗಳನ್ನು ಬಳಸುವ ಹಿಂದೆ ಮಾರುಕಟ್ಟೆ ತಂತ್ರವಿದೆ" ಎನ್ನುತ್ತಾರೆ.
ಕಾರು ಎಂದರೆ ಕೇವಲ ದೇಶದ ಜನರನ್ನು ಮಾತ್ರ ಸೆಳೆಯುವ ವಸ್ತುವಲ್ಲ. ಅದಕ್ಕೆ ಅಂತರ್ ರಾಷ್ಟ್ರೀಯ ಬ್ರಾಂಡ್ ಇಮೇಜ್ ಇದೆ. ಜಾಗತಿಕವಾಗಿ ಹೆಚ್ಚು ಪರಿಚಯವಿರುವ ಮಾಡೆಲ್ ಗಳನ್ನು ಈ ಸಂದರ್ಭದಲ್ಲಿ ಪರಿಚಯಿಸುತ್ತೇವೆ ಎಂದು ಹೆಚ್ಚಿನ ವಾಹನ ಕಂಪನಿಗಳು ಒಕ್ಕೋರಲಿನಿಂದ ಹೇಳುತ್ತವೆ.
ನಮ್ಮ ದೇಶದಲ್ಲಿಯೇ ಜಾಗತಿಕವಾಗಿ ಹೆಸರು ಗಳಿಸಿದ ರೂಪದರ್ಶಿಗಳಿದ್ದಾರೆ ಅಲ್ವೇ ಅಂತ ಕೇಳಬಹುದು. ಆದರೆ ಇರುವ ಬೆರಳಣಿಕೆಯ ರೂಪದರ್ಶಿಯರು ವಿದೇಶಿ ಕಂಪನಿಗಳ ಜಾಹೀರಾತುಗಳಲ್ಲಿ ಮಗ್ನವಾಗಿದ್ದಾರೆ. ನಮ್ಮ ಕಂಪನಿಗಳು ವಿದೇಶಿ ಫಿಗರು, ಪರ್ಸನಾಲಿಟಿಗಳನ್ನು ಹುಡುಕುತ್ತಿದ್ದಾರೆ. ಇದನ್ನು ದೂರದ ಬೆಟ್ಟ ನುಣ್ಣಗೆ ಅಂತ ಕರೆಯಬಹುದು ಅಲ್ಲವೇ?


Click it and Unblock the Notifications








