ದೇಶಕ್ಕೆ ಬಂತು ರೋಲ್ಸ್ ರಾಯ್ಸ್ ಹೊಸ "ಭೂತ"

Rolls-Royce launches new Ghost
ಘೋಸ್ಟ್ ಅರ್ಥ ಪಿಶಾಚಿ, ದೆವ್ವ, ಭೂತ, ಪ್ರೇತ. ಐಷಾರಾಮಿ ಕಾರುಗಳು ಕೂಡ ಪಿಶಾಚಿಗಳ ಹಾಗೇ. ಅದರ ದರ ಕಂಡು ಕೆಲವರು ಭೂತ ಹಿಡಿದಂತೆ ನಡುಗುತ್ತಾರೆ. ಶೀಘ್ರದಲ್ಲಿ ಹೊಸ ಭೂತವೊಂದು ದೇಶದ ರಸ್ತೆಗಿಳಿಯಲಿದೆ.

ಸದ್ಯ ದೆವ್ವದ ವಿಷಯ ಯಾಕೆಂದರೆ, ಐಷಾರಾಮಿ ಕಾರು ತಯಾರಿಕಾ ಕಂಪನಿ ರೋಲ್ಸ್ ರಾಯ್ಸ್ ಮೋಟರ್ ಕಾರ್ಸ್ ಇಂದು "ನೂತನ ಘೋಸ್ಟ್" ಕಾರನ್ನು ದೇಶಕ್ಕೆ ಪರಿಚಯಿಸಿದೆ. ಇದರ ಆರಂಭಿಕ ದರ ದೇಶದಲ್ಲಿ ಸುಮಾರು 3.05 ಕೋಟಿ ರು. ಇರಲಿದೆಯಂತೆ.

ನೂತನ ಘೋಸ್ ಸಾಕಷ್ಟು ಪರಿಷ್ಕೃತ ಆವೃತ್ತಿ. ಇದರ ವೀಲ್ ಬೇಸ್ ವಿಸ್ತಾರವಾಗಿದೆ. ಇದು 6.6 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಶೀಘ್ರದಲ್ಲಿ ಮಾರುಕಟ್ಟೆಗೆ ಆಗಮಿಸುವುದಾಗಿ ಬ್ರಿಟಿಷ್ ಕಂಪನಿ ಹೇಳಿದೆ.

"ಭಾರತದಲ್ಲಿ ಐಷಾರಾಮಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನೂತನ ಘೋಸ್ಟ್ ಮಾಡೆಲ್ ಹೊರತರುವ ಮೂಲಕ ಇಲ್ಲಿನ ಮಾರುಕಟ್ಟೆಯಲ್ಲಿ ಅಗ್ರಗಣ್ಯರಾಗಲು ಬಯಸಿದ್ದೇವೆ" ಎಂದು ರೋಲ್ಸ್ ರಾಯ್ಸ್ ಇಂಡಿಯಾ ವಹಿವಾಟು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಹೆರ್ಪಿಡ್ ಹಾಸೆನೊರ್ಲ್ ಹೇಳಿದ್ದಾರೆ.

"ಪ್ರಸಕ್ತ ವರ್ಷ ಎಷ್ಟು ಕಾರುಗಳು ಮಾರಾಟವಾಗಲಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಇಲ್ಲಿನ ಮಾರುಕಟ್ಟೆಯಲ್ಲಿನ ಬೇಡಿಕೆ ಕುರಿತು ಆಶಾದಾಯಕವಾಗಿದ್ದೇವೆ" ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ದೇಶದಲ್ಲಿ 80 ರೋಲ್ಸ್ ರಾಯ್ಸ್ ಕಾರುಗಳು ಮಾರಾಟವಾಗಿದ್ದವು.

Article Published On: Friday, October 7, 2011, 11:47 [IST]
English summary
British Luxury car company Rolls-Royce Motor Cars launched a new variant of its Ghost model. New variant Ghost starting price of Rs. 3.05 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+