ಸ್ಕೋಡಾ ಸೆಡಾನ್ ಕಾರು ರಾಪಿಡ್ ಉತ್ಪಾದನೆ ಸುರು

"ಇಂದು(ಶುಕ್ರವಾರ) ನ್ಯೂ ರಾಪಿಡ್ ಕಾಂಪ್ಯಾಕ್ಟ್ ಸಲೋನ್ ಕಾರಿನ ಭಾರತದ ಆವೃತ್ತಿಯ ಉತ್ಪಾದನೆಯನ್ನು ಆರಂಭಿಸುತ್ತಿದ್ದೇವೆ" ಎಂದು ಸ್ಕೋಡಾ ಆಟೋ ಚೆರ್ಮನ್ ವಿನ್ ಫ್ರಿಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೀಘ್ರದಲ್ಲಿ 5 ಸೀಟಿನ ನೂತನ ರಾಪಿಡ್ ಕಾರನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಕಾರು ಸಾಕಷ್ಟು ಸ್ಥಳಾವಕಾಶ ಹೊಂದಿದ್ದು, ಐದು ಜನರು ಆರಾಮವಾಗಿ ಕುಳಿತುಕೊಳ್ಳಬಹುದು ಎಂದು ವಿನ್ ಫ್ರಿಡ್ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ನೂತನ ರಾಪಿಡ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕಲಿದೆ. ಕಂಪನಿಯು 2018ಕ್ಕೆ ಒಟ್ಟಾರೆ ಉತ್ಪಾದನೆಯನ್ನು ಎರಡು ಪಟ್ಟು ಹೆಚ್ಚಿಸುವ ಗುರಿಯನ್ನೂ ಹೊಂದಿದೆ.


Click it and Unblock the Notifications








