ಚಂಡಿಗಡದಲ್ಲಿ 3.10 ಲಕ್ಷ ರು.ಗೆ "ಎಕೆ-47" ಮಾರಾಟ

AK-47 sold for Rs 3.10 lakh
ಎಕೆ-47 ಎಂದರೆ ಎಲ್ಲರೂ ಬೆಚ್ಚಿಬೀಳುತ್ತಾರೆ. ಉಗ್ರರು, ನಕ್ಸಲರು ಇಂತಹ ಅತ್ಯಾಧುನಿಕ ಆಟೋಮ್ಯಾಟಿಕ್ ಕಲೋಸ್ನಿಕೋವ್ ವೆಪನ್ ಗಳಿಂದ ಉಂಟುಮಾಡುವ ಹಾನಿಗೆ ಲೆಕ್ಕವಿಲ್ಲ. ಆದರೆ 3.10 ಲಕ್ಷ ರುಪಾಯಿಗೆ ಎಕೆ-47 ಬಿಕರಿ ಎಂದರೆ ಎಲ್ಲರಿಗೂ ಅಚ್ಚರಿಯಾದೀತು. ಆದರೆ ಇಷ್ಟು ಲಕ್ಷ ರು.ಗೆ ಮಾರಾಟವಾಗಿರುವುದು ಗನ್ ಅಲ್ಲ. ವಾಹನ ಫ್ಯಾನ್ಸಿ ನಂಬರ್!!

ಚಂಡಿಗಡದಲ್ಲಿ ಕೆಲವು ದಿನದ ಹಿಂದೆ ವಾಹನ ರಿಜಿಸ್ಟ್ರೇಷನ್ ಸಂಖ್ಯೆ ಹರಾಜು ನಡೆಯಿತು. ಇದರಲ್ಲಿ ಎಕೆ-47 ಸಂಖ್ಯೆ 3.10 ಲಕ್ಷ ರು.ಗೆ ಹರಾಜಾಗಿದೆ. ಎಕೆ-56 ಹೆಸರಿನ ನಂಬರ್ ಕೂಡ ಹರಾಜಿನಲ್ಲಿತ್ತು. ಆದರೆ ಇದು ಕೇವಲ 10 ಸಾವಿರ ರುಪಾಯಿಗೆ ಬಿಕರಿಯಾಯಿತು. ಅಷ್ಟೇ!

ಪಂಜಾಬ್ ಮೂಲದ ಧಾರ್ಮಿಕ ಸಂಸ್ಥೆಯೊಂದು ತನ್ನಲ್ಲಿರುವ ಐಷಾರಾಮಿ ಕಾರಿಗೆ ಸುಮಾರು 3.10 ಲಕ್ಷ ರು. ಪಾವತಿಸಿ ಎಕೆ-47 ರಿಜಿಸ್ಟ್ರೇಷನ್ ನಂಬರ್ ತನ್ನದಾಗಿಸಿಕೊಂಡಿದೆ. ಚಂಡಿಗಡ ರಿಜಿಸ್ಟ್ರೇಷನ್ ಆಂಡ್ ಲೈಸನ್ಸಿಂಗ್ ಅಥಾರಿಟಿಯು ಫ್ಯಾನ್ಸಿ ನಂಬರ್ ಹರಾಜಿನಿಂದ ಒಟ್ಟು 48 ಲಕ್ಷ ರುಪಾಯಿ ಬಾಚಿಕೊಂಡಿದೆ.

ಎಕೆ-47 ನಂಬರ್ 3.10 ಲಕ್ಷ ರುಪಾಯಿಗೆ ಮಾರಾಟವಾದರೆ, 0007 ನಂಬರ್ 4.21 ಲಕ್ಷ ರು.ಗೆ, 0005 ಸಂಖ್ಯೆ 3.25 ಲಕ್ಷ ರು.ಗೆ, 0001 ಅಂಕಿ 3.1 ಲಕ್ಷ ರುಪಾಯಿಗೆ ಹರಾಜಾಗಿದೆ.

More from DriveSpark

Article Published On: Monday, October 10, 2011, 16:58 [IST]
English summary
Vehicle lovers are much crazy about Fancy Registration Numbers for their vehicles. In Chandigarh, AK-47 sold in an open auction for just Rs 3.10 lakh. Don't wary 'AK-47' as registration number for a luxury car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+