ಮಾರುತಿ ಸುಜುಕಿ ಹತ್ತು ಉದ್ಯೋಗ ಕಡಿತ, 5 ಸಸ್ಪೆಂಡ್

Maruti Fires 10 Workers; Suspends 5 More
ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ, ಮಾನೆಸರ್ ಘಟಕದ ಸಿಬ್ಬಂದಿಗಳ ವಿರುದ್ಧ ಕಠಿಣ ನಿಲುವನ್ನು ಮುಂದುವರೆಸಿದೆ. ಹತ್ತು ಕೆಲಸಗಾರರನ್ನು ಡಿಸ್ ಮಿಸ್ ಮಾಡಿರುವುದಾಗಿ, 5 ಟ್ರೈನಿಗಳನ್ನು ಕೆಲಸದಿಂದ ತೆಗೆದು ಹಾಕಿರುವುದಾಗಿ ಮತ್ತು ಹತ್ತಕ್ಕೂ ಹೆಚ್ಚು ನೌಕರರನ್ನು ಅಮಾನತು ಮಾಡಿರುವುದಾಗಿ ಕಂಪನಿಯ ವಕ್ತಾರರು ಹೇಳಿದ್ದಾರೆ.

ಅಕ್ಟೋಬರ್ 7ರಿಂದ ಮತ್ತೆ ನೌಕರರು ಪ್ರತಿಭಟನೆ ಆರಂಭಿಸಿದ್ದರು. ಪ್ರತಿಭಟನಾಕಾರರು ಬಲವಂತವಾಗಿ ಘಟಕದೊಳಗೆ ಕೂಡಿಹಾಕಿದ್ದ 100 ನೌಕರರನ್ನು ರಕ್ಷಿಸಿರುವುದಾಗಿ ಕಂಪನಿ ಹೇಳಿದೆ. ಜೊತೆಗೆ ಪೊಲೀಸರ ನೆರವಿನಿಂದ ಸುಮಾರು 350 ಕೆಲಸಗಾರರಿಗೆ ರಕ್ಷಣೆ ನೀಡಿರುವುದಾಗಿ ಮಾರುತಿ ಹೇಳಿದೆ. ಇವರೆಲ್ಲ ಪ್ರತಿಭಟನಾ ನಿರತ ನೌಕರರಿಂದ ಹಲ್ಲೆಗೀಡಾಗಿದ್ದರು.

ಕಳೆದ ಶುಕ್ರವಾರದಿಂದ ಸುಮಾರು 170 ಸಿಬ್ಬಂದಿಗಳು ಪ್ರತಿಭಟನೆ ನಿರತರಾಗಿದ್ದಾರೆ. ಹರ್ಯಾಣ ಸರಕಾರಿ ಅಧಿಕಾರಿಗಳ ಮುಂದೆ ಕಂಪನಿ ಮತ್ತು ನೌಕರರ ನಡುವೆ ಉತ್ತಮ ನಡತೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ಅಕ್ಟೋಬರ್ ಒಂದರಂದು ಎಲ್ಲಾ ನೌಕರರು ಒಪ್ಪಿರುವ ಒಪ್ಪಂದದ ಸೂಚಿಯಂತೆ ಕಾರ್ಯನಿರ್ವಹಿಸುತ್ತಿರುವುದಾಗಿ ಮಾರುತಿ ಸುಜುಕಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

More from DriveSpark

Article Published On: Monday, October 10, 2011, 15:15 [IST]
English summary
Maruti Suzuki India has taken strict action against its workers in Manesar in response to the flash strike that started on Friday, Oct 7th. The carmaker's spokesperson said 10 workers were dismissed, 5 trainees were terminated and 10 more workers were suspended. This action was in response to violent incidents inside the plant on Friday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+