ಸ್ಕೋಡಾ ಕಾಂಪ್ಯಾಕ್ಟ್ ಕಾರು "ಸಿಟಿಗೊ"ಗೆ ದಾರಿಬಿಡಿ

"ಯುರೋಪ್ ಮಾರುಕಟ್ಟೆಗಾಗಿ ಸಿಟಿಗೊ ಸಣ್ಣಕಾರನ್ನು ಅಭಿವೃದ್ಧಿಪಡಿಸಲಾಗಿತ್ತು. ಇಂತಹ ಕಾರುಗಳಿಗೆ ಭಾರತದಂತಹ ಮಾರುಕಟ್ಟೆಯಲ್ಲೂ ಮಾರುಕಟ್ಟೆಯಿದೆ" ಎಂದು ಸ್ಕೋಡಾ ಆಟೋ ಗ್ಲೋಬಲ್ ಚೇರ್ಮನ್ ಹೇಳಿದ್ದಾರೆ.
"ನಾವು ಭಾರತದ ಮಾರುಕಟ್ಟೆಯ ಕುರಿತು ಹೆಚ್ಚು ಆಶಾದಾಯಕವಾಗಿದ್ದೇವೆ. ಇಲ್ಲಿ ನಮ್ಮ ವಾಹನ ಮಾರಾಟ ಪ್ರಗತಿದರ ಶೇಕಡ 10ರಿಂದ ಶೇ. 12ರವರೆಗೆ ಪ್ರಗತಿ ಕಾಣುವ ನಿರೀಕ್ಷೆಯಿದೆ" ಎಂದರು.
ಸ್ಕೋಡಾ ಇತ್ತೀಚಿನ ದಿನಗಳಲ್ಲಿ ಹೊರತಂದು ಕಾರುಗಳಲ್ಲಿ ಸಿಟಿಗೊ ವಿನೂತನ ಮತ್ತು ಸಣ್ಣ ಕಾರಾಗಿದೆ. ಈ ಕಾರು ಮುಂದಿನ ವರ್ಷದ ಆರಂಭದಲ್ಲಿ ದೇಶದ ರಸ್ತೆಗಿಳಿಯುವ ನಿರೀಕ್ಷೆಯಿದೆ. ಫೋಕ್ಸ್ ವ್ಯಾಗನ್ UP ಕಾರಿಗೆ ಹೋಲಿಸಿದರೆ ಸಿಟಿಗೊ ಗಾತ್ರದಲ್ಲಿ ಸಣ್ಣದಾಗಿದೆ.


Click it and Unblock the Notifications








