ಇಯಾನ್ ಸಣ್ಣಕಾರು ಅಕ್ಟೋಬರ್ 13ರಂದು ರಸ್ತೆಗೆ

ಈಗಾಗಲೇ ಕಂಪನಿಯು ಇಯಾನ್ ಜಾಹೀರಾತು ಮತ್ತು ವೆಬ್ ಸೈಟ್ ಮೂಲಕ ಪ್ರಚಾರವನ್ನು ಜೋರಾಗಿಯೇ ಆರಂಭಿಸಿದೆ. 'Hyundai Eon Will Be ON In …" ಅಂತ ಎಲ್ಲೆಲ್ಲೂ ಜಾಹೀರಾತು ಬ್ಯಾನರುಗಳು ಇಂಟರ್ ನೆಟ್ ನಲ್ಲಿ ಅಂಟಿಕೊಂಡಿವೆ. ಕಂಪನಿಯು ನಾಳೆ ಆಲ್ಟೊ ಪ್ರತಿಸ್ಪರ್ಧಿ ಇಯಾನ್ ಕಾರನ್ನು ಔಪಚಾರಿಕವಾಗಿ ಪರಿಚಯಿಸಲಿದೆ.
ಮೊದಲ ಕಾರು ಖರೀದಿಗೆ ಹ್ಯುಂಡೈ ಇಯಾನ್ ಸೂಕ್ತ ಎನ್ನಲಾಗುತ್ತಿದೆ. ಇಲ್ಲಿವರೆಗೆ ಈ ಸ್ಥಾನ ಆಲ್ಟೊ ಪಡೆದಿತ್ತು. ಆರಂಭಿಕ ಕಾರು ಗ್ರಾಹಕರಿಗೆ ಕಡಿಮೆ ದರದ, ದಕ್ಷತೆಯ ಇಯಾನ್ ಸೂಕ್ತವೆಂದು ಕಂಪನಿ ಹೇಳಿದೆ. ಇದರ ದರ ಸುಮಾರು 2 ಲಕ್ಷ ರು. ಆಸುಪಾಸಿನಲ್ಲಿರಲಿದೆ. ವಿವಿಧ ಆವೃತ್ತಿಗಳ ದರ ಸುಮಾರು 2.5 ಲಕ್ಷ ರು.ನಿಂದ 3.5 ಲಕ್ಷ ರು.ವರೆಗಿರಲಿದೆ.
ಇದರ ದರ ಅಗ್ಗವಾಗಿರುವುದರಿಂದ ಟಾಟಾ ನ್ಯಾನೊ, ಷೆವರ್ಲೆ ಸ್ಪಾರ್ಕ್ ಕಾರುಗಳಿಗೆ ಸ್ಪರ್ಧೆ ನೀಡಲಿದೆ. ಸರಿಯಾಗಿ ದೀಪಾವಳಿ ಸಮಯಕ್ಕೆ ಈ ಕಾರು ಬರುತ್ತಿರುವುದರಿಂದ ಹೆಚ್ಚು ಗ್ರಾಹಕರನ್ನು ಸೆಳೆಯುವ ನಿರೀಕ್ಷೆಯೂ ಕಂಪನಿಗಿದೆ.


Click it and Unblock the Notifications








