ರಾ.ಒನ್ ಸಿನಿಮಾದಲ್ಲಿ ಶಾರೂಖ್ VW ಸವಾರಿ?

Will Shahrukh Drive a VW in Ra.One?
ಹೀಗೊಂದು ಅನುಮಾನ ದಟ್ಟವಾಗಿದೆ. ಶಾರೂಖ್ ಖಾನ್ ಸೂಪರ್ ಹೀರೋ ಆಗಿ ನಟಿಸುತ್ತಿರುವ ರಾಒನ್ ಸಿನಿಮಾದಲ್ಲಿ ಫೋಕ್ಸ್ ವ್ಯಾಗನ್ ಕಾರುಗಳಿರಲಿವೆಯೇ? ಅಥವಾ ವೇಗದ ಬುಗಾಟಿ ವೆರೊನ್ ಇರಲಿದೆಯೇ?

ರಾ.ಒನ್ ಸಿನಿಮಾ ದೇಶದ ವಾಹನ ಮಾರುಕಟ್ಟೆಗೂ ಪ್ರಮುಖ ಚಿತ್ರವಾಗಿದೆ. ಯಾಕೆಂದರೆ ಈ ಸಾಹಸ ಪ್ರಧಾನ ಚಿತ್ರದಲ್ಲಿ ಲೆಕ್ಕವಿಲ್ಲದಷ್ಟು ವಾಹನಗಳನ್ನು ಬಳಸಲಾಗಿದೆ ಎಂದು ವರದಿಗಳು ಹೇಳಿವೆ. ಶಾರೂಖ್ ಖಾನ್ ಗಾಗಿ ವಿಶೇಷವಾದ ಬೈಕ್ ಕೂಡ ನಿರ್ಮಿಸಲಾಗಿದೆ.

ನಿನ್ನ ಶಾರೂಖ್ ಅರ್ಧಾಂಗಿ ಗೌರಿ ಖಾನ್ ಫೋಕ್ಸ್ ವ್ಯಾಗನ್ ದುಬಾರಿ ಕಾರೊಂದನ್ನು ಗಿಫ್ಟ್ ಆಗಿ ಪಡೆಯಲಿದ್ದಾರೆ ಎಂದು ವರದಿಯಾಗಿತ್ತು. ಹೀಗಾಗಿ ರಾ.ಒನ್ ಸಿನಿಮಾದಲ್ಲಿ ಫೋಕ್ಸ್ ವ್ಯಾಗನ್ ಕಾರುಬಾರು ಜೋರಿದೆಯೇ ಎಂಬ ಅನುಮಾನಗಳು ದಟ್ಟವಾಗಿದೆ.

ಕಾರುಗಳನ್ನು ಸೆಲೆಬ್ರಿಟಿಗಳಿಗೆ ಉಡುಗೊರೆಯಾಗಿ ನೀಡುವುದು ಇದು ಮೊದಲಲ್ಲ. ಆದರೆ ಚಿತ್ರದ ವಿಶೇಷ ದೃಷ್ಯಗಳಿಗಾಗಿ ವಿಶೇಷ ಕಾರುಗಳನ್ನು ಕಾರು ಕಂಪನಿಗಳು ಅಭಿವೃದ್ಧಿಪಡಿಸಿಕೊಡುವುದು ಮಾತ್ರ ಭಾರತಕ್ಕೆ ಹೊಸತು ಎನ್ನಲಾಗಿದೆ.

ಪೊಲೊ ಮತ್ತು ವೆಂಟೊ ಕಾರುಗಳ ಮೂಲಕ ದೇಶದ ಮಾರುಕಟ್ಟೆಯಲ್ಲಿ ಪ್ರಗತಿ ಕಾಣುತ್ತಿರುವ ಫೋಕ್ಸ್ ವ್ಯಾಗನ್ ಜನಪ್ರಿಯತೆ ರಾ.ಒನ್ ಸಿನಿಮಾದ ನಂತರ ಹೆಚ್ಚಾಗುವ ನಿರೀಕ್ಷೆಯೂ ಇದೆ.

ಬಾಲಿವುಡ್ ವರದಿಗಳ ಪ್ರಕಾರ ರಾ.ಒನ್ ಸಿನಿಮಾಗಳಲ್ಲಿ ಶಾರೂಖ್ ಖಾನ್ ಬುಗಾಟಿ ವೆರೊನ್ ಕಾರು ಡ್ರೈವ್ ಮಾಡಲಿದ್ದಾರೆ. ಇದು ಜಗತ್ತಿನ ಅತ್ಯಂತ ವೇಗದ ಕಾರು. ಈ ಚಿತ್ರದಲ್ಲಿ ಕಾರು ಸವಾರಿ ಮಾಡಲು ಬಾಲಿವುಡ್ ನಟ ಶಾರೂಖ್ ಖಾನ್ ಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ಕೂಡ ಕೆಲವು ವರದಿಗಳು ಹೇಳುತ್ತವೆ.

ಹಾಗಾದರೆ ರಾ.ಒನ್ ನಿರ್ಮಾಪಕಿ ಗೌರಿ ಖಾನ್ ಗೆ ಫೇಟನ್ ಕಾರು ಉಡುಗೊರೆಯಾಗಿ ಫೋಕ್ಸ್ ವ್ಯಾಗನ್ ನೀಡೊದ್ಯಾಕೆ ಎಂದು ವಿಶ್ಲೇಷಕರು ಈಗ ಚಿಂತಿಸುತ್ತಿದ್ದಾರೆ. ಸಿನಿಮಾದಲ್ಲಿ ಬುಗಾಟಿ ಕಾರಿಗೆ ಬದಲಾಗಿ ಫೋಕ್ಸ್ ವ್ಯಾಗನ್ ಕಾರು ಬಳಸಲಾಗಿದೆಯೇ? ಅಥವಾ ಬುಗಾಟಿಯೊಂದಿಗೆ ಫೋಕ್ಸ್ ವ್ಯಾಗನ್ ಕಾರುಗಳನ್ನೂ ಬಳಸಲಾಗಿದೆಯೇ ಗೊತ್ತಿಲ್ಲ.

ಫೋಕ್ಸ್ ವ್ಯಾಗನ್ ಫೇಟನ್ ಕಾರು ಕಂಪನಿಯ ಪ್ರಮುಖ ಐಷಾರಾಮಿ ಕಾರಾಗಿದೆ. ಇದರ ದರ ಸುಮಾರು 32 ಲಕ್ಷ ರು. ಆಗಿದೆ. ಹೆಚ್ಚು ಫೀಚರುಗಳನ್ನು ಅಳವಡಿಸಿದ ಫೇಟನ್ ಆವೃತ್ತಿಗೆ ಸುಮಾರು 50 ಲಕ್ಷ ರು. ಆಗಿದೆ.

Article Published On: Wednesday, October 12, 2011, 10:07 [IST]
English summary
Will Shahrukh Drive a VW in Ra.One? Volkswagen the German carmaker is set to gift its most expensive car sold in India, the Phaeton luxury sedan to Gauri Khan, the producer of soon to be released Bollywood film Ra.One and wife of Bollywood super star Shahrukh Khan. It is believed Ra.One will feature one or more Volkswagen cars in action.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+