ಪ್ರತಿಭಟನೆ ಕಾನೂನುಬಾಹಿರ ಅನ್ನಲು ಹೈಕೋರ್ಟ್ ನಕಾರ

Maruti Suzuki Manesar plant strike
ನವದೆಹಲಿ, ಅ 14: ನೌಕರರ ಕಿರಿಕಿರಿಯಿಂದ ತತ್ತರಿಸಿರುವ ಮಾರುತಿ ಸುಜುಕಿಗೆ ಮತ್ತೊಂದು ಹಿನ್ನಡೆಯಾಗಿದೆ. ಮಾನೆಸರ್ ಘಟಕದಲ್ಲಿ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರ ಕಾನೂನು ಬಾಹಿರ ಅಂತ ಒಪ್ಪಲು ಹೈಕೋರ್ಟ್ ನಿರಾಕರಿಸಿದೆ.

ನೌಕರರು ನಡೆಸುತ್ತಿರುವ ಪ್ರತಿಭಟನೆ ಅಸಾಂವಿಧಾನಿಕ ಎನ್ನಲು ನಿರಾಕರಿಸಿದೆ. ಆದರೆ ಮಾರುತಿ ಫ್ಯಾಕ್ಟರಿಯ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಪ್ರತಿಭಟನೆ ನಡೆಸಕೂಡದು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ.

ಕಂಪನಿಯ ನೌಕರರು ಈ ಹಿಂದೆ ಒಂದು ತಿಂಗಳ ಕಾಲ ಪ್ರತಿಭಟನೆ ನಡೆಸಿದ್ದರು. ಇದರಿಂದ ಬೇಸೆತ್ತ ಕಂಪನಿ ಅಕ್ಟೋಬರ್ ಒಂದರಂದು ನೌಕರರಿಂದ ಉತ್ತಮ ನಡತೆ ಬಂಧಕ್ಕೆ ಸಹಿ ಹಾಕಿಸಿತ್ತು. ಆದರೆ ಈ ಅಗ್ರಿಮೆಂಟಿಗೆ ವಿರುದ್ಧವಾಗಿ ಮತ್ತೆ ನೌಕರರು ಪ್ರತಿಭಟನೆ ಆರಂಭಿಸಿದಾಗ ಕಂಪನಿಯು ಪಂಜಾಬ್-ಹರ್ಯಾಣ ಹೈಕೋರ್ಟ್ ಮೆಟ್ಟಲೇರಿತ್ತು.

ನೌಕರರ ಪ್ರತಿಭಟನೆಯನ್ನು ಹರ್ಯಾಣ ಸರಕಾರ ಅಸಾಂವಿಧಾನಿಕ ಎಂದಿತ್ತು.ನೌಕರರ ಪ್ರತಿಭಟನೆಯಿಂದ ಮಾರುತಿಯ ಕಾರು ಉತ್ಪಾದನೆಗೆ ಭಾರಿ ಹಿನ್ನಡೆಯಾಗಿದೆ. ಕಂಪನಿಯ ಜನಪ್ರಿಯ ಹೊಸ ಸ್ವಿಫ್ಟ್ ಉತ್ಪಾದನೆಯೂ ಕುಂಠಿತವಾಗಿದೆ. ಹೀಗಾಗಿ ಸ್ವಿಫ್ಟ್ ವೇಟಿಂಗ್ ಅವಧಿಯೂ ಹೆಚ್ಚಾಗಿದೆ.

More from DriveSpark

Article Published On: Friday, October 14, 2011, 11:45 [IST]
English summary
Punjab and Haryana High Court refuses to declare Maruti Suzuki Manesar plant workers strike is illegal. But Court asked to striking workers leave the Manesar plant premises.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+