ಮಾರುತಿ ಸುಜುಕಿ: ಪ್ರತಿಭಟನೆ ನಿರತರು ಮನೆಗೆ

ಮಾರುತಿ ಸುಜುಕಿ ನೌಕರರು ಅಕ್ಟೋಬರ್ 7ರಂದು ಮತ್ತೆ ಮುಷ್ಕರ ಆರಂಭಿಸಿದ್ದರು. ನೂರಾರು ನೌಕರರು ಸ್ವಯಂಪ್ರೇರಿತವಾಗಿ ಘಟಕದೊಳಗೆ ಲಾಕ್ ಹಾಕಿ ಬಂಧನಕ್ಕೆ ಒಳಗಾಗಿದ್ದರು. ಈ ಮೂಲಕ ಘಟಕವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು.
ಮಾನೆಸರ್ ಘಟಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹರ್ಯಾಣ ಸರಕಾರ ಅಸಾಂವಿಧಾನಿಕ ಎಂದು ಕರೆದಿತ್ತು. ಮಾರುತಿ ಸುಜುಕಿ ಈ ಕುರಿತು ಹೈಕೋರ್ಟ್ ನಲ್ಲಿ ಮಾರುತಿ ದೂರು ದಾಖಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್ ನೌಕರರ ಪ್ರತಿಭಟನೆ ಅಸಾಂವಿಧಾನಿಕ ಎಂದು ಒಪ್ಪಲು ನಿರಾಕರಿಸಿತ್ತು.
ಆದರೆ ಹೈಕೋರ್ಟ್ ಯಾವುದೇ ಪ್ರತಿಭಟನೆ ಮಾರುತಿ ಸುಜುಕಿ ಘಟಕದ 100 ಮೀಟರ್ ವ್ಯಾಪ್ತಿಯಲ್ಲಿ ನಡೆಯಕೂಡದು ಎಂದು ಸ್ಪಷ್ಟವಾಗಿ ತಿಳಿಸಿತ್ತು. ಹೀಗಾಗಿ ಕಂಪನಿಯು ಪ್ರತಿಭಟನೆ ನಿರತರನ್ನು ಕಂಪನಿಯ ಅಗ್ರಿಮೆಂಟಿಗೆ ವರ್ತಿಸುತ್ತಿರುವ ಹಿನ್ನಲೆಯಲ್ಲಿ ಮನೆಗೆ ಕಳುಹಿಸಲು ಆರಂಭಿಸಿದೆ.


Click it and Unblock the Notifications








