ಬಿಎಂಡಬ್ಲ್ಯು ಮಿನಿ ಕಾರು ಜನವರಿ ತಿಂಗಳಲ್ಲಿ ರಸ್ತೆಗೆ

ಪುಟ್ಟ ಲಕ್ಷುರಿ ಕಾರು ಮಾರಾಟಕ್ಕಾಗಿ ದೇಶದಲ್ಲಿ ಸುಮಾರು ಒಂದು ಡಜನ್ ಡೀಲರ್ಷಿಪ್ ಕೇಂದ್ರ ತೆರೆಯುವುದಾಗಿ ಬಿಎಂಡಬ್ಲ್ಯು ಹೇಳಿದೆ.
"ಮುಂದಿನ ವರ್ಷ ಮಿನಿ ಕಾರು ಭಾರತಕ್ಕೆ ಬರಲಿದೆ ಎಂಬುದನ್ನು ತಿಳಿಸಲು ಸಂತೋಷ ಪಡುತ್ತೇನೆ. ಇದೀಗ ಕಂಪನಿಯು ಮಿನಿ ಕಾರಿನ ಆವೃತ್ತಿಯನ್ನು ಪ್ರದರ್ಶಿಸಿದೆ" ಎಂದು ಬಿಎಂಡಬ್ಲ್ಯು ಇಂಡಿಯಾ ಅಧ್ಯಕ್ಷ ಆಂಡ್ರಾಸ್ ಸ್ಕಾಫ್ ಹೇಳಿದ್ದಾರೆ.
ಸಿಬಿಯು ಯುನಿಟ್ ಮೂಲಕ ಕಂಪನಿಯು ಆರಂಭಿಕವಾಗಿ ಮಿನಿಕಾರುಗಳನ್ನು ಆಮದು ಮಾಡಿಕೊಳ್ಳಲಿದೆ. 2009ರಲ್ಲಿಯೇ ಮಿನಿ ಮಾದರಿಯ ಕಾರುಗಳನ್ನು ಪರಿಚಯಿಸಲು ಬಿಎಂಡಬ್ಲ್ಯು ಯೋಜಿಸಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಮಿನಿ ಕಾರುಗಳ ಬಿಡುಗಡೆಯನ್ನು ಮುಂದೂಡಿತ್ತು.
ಮಿನಿ ಕಾರು ದರವಿಲ್ಲಿ ಸುಮಾರು 25 ಲಕ್ಷ ರು. ಅಥವಾ ಹೆಚ್ಚಿರಲಿದೆ. "ಕಾರಿನ ದರದ ಕುರಿತು ಇನ್ನೂ ನಾವು ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಇದು ಸಣ್ಣ ಕಾರಾದರೂ ಐಷಾರಾಮಿ ಕಾರಾಗಿರುವುದರಿಂದ ದರ ಸುಮಾರು 25 ಲಕ್ಷ ರು. ಆಸುಪಾಸಿನಲ್ಲಿರಲಿದೆ" ಎಂದು ಅವರು ಹೇಳಿದ್ದಾರೆ.


Click it and Unblock the Notifications








