ತರಕಾರಿ ಮತ್ತು ಸೆಕೆಂಡ್ ಹ್ಯಾಂಡ್ ಮಾರುತಿ ಕಾರು ದುಬಾರಿ

Used Car Price To Go Skyward
ಕಳೆದ ಒಂದೆರಡು ದಿನದಿಂದ ಬೆಂಗಳೂರಿನಲ್ಲಿ ತರಕಾರಿ ದರ ಹೆಚ್ಚಾಗಿದೆ. ಕೇಳಿದ್ರೆ ತಮಿಳುನಾಡಿನಲ್ಲಿ ಮಳೆ ಸಾರ್, ತರಕಾರಿ ಬರ್ತಾ ಇಲ್ಲ ಅಂತ ಟೊಮೆಟೊ ತಳ್ಳೋ ಗಾಡಿಯವ ಹೇಳುತ್ತಾನೆ. ಹೌದಾ..? ಅಂತ ಚಿಂತೆಯ ಮುಖ ಮಾಡಿದರೆ "ಒಂದೆರಡು ದಿನದಲ್ಲಿ ಸರಿ ಹೋಗುತ್ತೆ ಸಾರ್" ಅಂತ ಅವನು ಸಮಧಾನ ಮಾಡುತ್ತಾನೆ.

ಖಂಡಿತಾ ತರಕಾರಿ ದರ ಒಂದೆರಡು ದಿನದಲ್ಲಿ ಕಡಿಮೆಯಾಗಬಹುದು. ಆದರೆ ನೀವೀಗ ಮಾರುತಿ ವ್ಯಾಗನಾರ್, ಆಲ್ಟೊ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಹೋದರೆ ಮಾತ್ರ ತಬ್ಬಿಬ್ಬಾಗುತ್ತೀರಿ. 80 ಸಾವಿರ ರು.ಗೆ ಸಿಗುತ್ತೆ ಅಂತ ಹೋದ್ರೆ ಈಗ ಮಾರುತಿ ಸೆಕೆಂಡ್ ಹ್ಯಾಂಡ್ ಕಾರುಗಳ ದರವೂ ರಾಕೇಟ್ ವೇಗದಲ್ಲಿ ಎತ್ತರಕ್ಕೆ ಹೋಗಿದೆ.

ಹೆಚ್ಚಾಗಿ ಮೊದಲ ಬಾರಿ ಕಾರೊಂದು ಖರೀದಿಸುವರು ಮಾರುತಿ ಸುಜುಕಿ ಕಾರುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರ ಕಡಿಮೆ ದರ, ಕಡಿಮೆ ನಿರ್ವಹಣೆ ವೆಚ್ಚ ಮತ್ತು ಅತ್ಯುತ್ತಮ ಸೇವೆ ಇದಕ್ಕೆ ಕಾರಣ. ಇವೆಲ್ಲ ಕಾರಣಕ್ಕೆ ಮಾರುತಿ ದೇಶದಲ್ಲಿ ಬೆಸ್ಟ್ ಸೆಲ್ಲರ್ ಕಾರ್ ಕಂಪನಿಯಾಗಿದೆ.

ಇಷ್ಟೇ ಅಲ್ಲ. ಮಾರುತಿ ಸುಜುಕಿ ಕಾರುಗಳಿಗೆ ಮರುಮಾರಾಟ ಮೌಲ್ಯವೂ ಹೆಚ್ಚು. ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಯಲ್ಲಿ ಯಾವತ್ತೂ ಮಾರುತಿಗೆ ಮೊದಲ ಮಣೆ. ಹೆಚ್ಚಾಗಿ ಯುವಕರು ಸೆಕೆಂಡ್ ಹ್ಯಾಂಡ್ ಮಾರುತಿ ಕಾರು ಖರೀದಿಸುತ್ತಾರೆ ಎಂದು ಡೀಲರ್ ಒಬ್ಬರು ಹೇಳುತ್ತಾರೆ.

ಕೆಲವರು ಹೊಸ ಕಾರಿಗೆ ಅಷ್ಟೊಂದು ಹಣ ನೀಡಲು ಸಿದ್ದರಿರುವುದಿಲ್ಲ. ಹೀಗಾಗಿ ಸೆಕೆಂಡ್ ಹ್ಯಾಂಡ್ ಮೊರೆ ಹೋಗುತ್ತಾರೆ. ಹೀಗೆ ಮಾರುತಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಹೆಚ್ಚಲು ಸಾಕಷ್ಟು ಕಾರಣಗಳಿವೆ. ಇರಲಿ.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅದಕ್ಕೆ ಕಾರಣ ಕಂಪನಿಯ ನೌಕರರಂತೆ. ಮಾನೆಸರ್ ಘಟಕದಲ್ಲಿ ನೌಕರರ ಪ್ರತಿಭಟನೆಯಿಂದ ಕಾರು ಉತ್ಪಾದನೆ ನಾಟಕೀಯವಾಗಿ ಇಳಿಕೆ ಕಂಡಿದೆ. ಈಗ ಕಂಪನಿ ದಿನಕ್ಕೆ ಕೇವಲ 350 ಕಾರುಗಳನ್ನು ಉತ್ಪಾದಿಸುತ್ತಿದೆ. ಇಲ್ಲವಾದಲ್ಲಿ ದಿನಕ್ಕೆ ಸುಮಾರು 2 ಸಾವಿರ ಕಾರುಗಳನ್ನು ಉತ್ಪಾದಿಸಲಾಗುತ್ತಿತ್ತು. ಈಗ ಸ್ವಿಫ್ಟ್ ವೇಟಿಂಗ್ ಪಿರೆಯಿಡ್ ಕೂಡ ಹೆಚ್ಚಾಗಿದೆ.

ಈಗ ಮಾರುತಿ ಸೆಕೆಂಡ್ ಹ್ಯಾಂಡ್ ಕಾರು ಸುಲಭವಾಗಿ ದೊರಕುತ್ತಿಲ್ಲ. ಬೇಡಿಕೆ ಹೆಚ್ಚಿರುವುದರಿಂದ ಡೀಲರುಗಳು ಹೇಳಿದ ರೇಟ್ ಗೆ ತಲೆಬಾಗಬೇಕಾಗುತ್ತದೆ. ಆಲ್ಟೊ ಅಥವಾ ವ್ಯಾಗನಾರ್ ಸೆಕೆಂಡ್ ಹ್ಯಾಂಡ್ ದರ ಸದ್ಯ ತರಕಾರಿ ದರದಂತೆ ಒಮ್ಮೆಗೆ ಏರಿಕೆ ಕಂಡಿದೆ.

ತರಕಾರಿ ದರವಾದರೆ ಕೆಲವು ದಿನದಲ್ಲಿ ಸಹಜ ಸ್ಥಿತಿಗೆ ಬರುತ್ತದೆ. ಆದರೆ ಸೆಕೆಂಡ್ ಹ್ಯಾಂಡ್ ಮಾರುತಿ ಕಾರುಗಳ ದರ ಕಡಿಮೆಯಾಗುತ್ತದೆಯೇ ಎಂಬ ಪ್ರಶ್ನೆ ಸಹಜ.

ಮಾನೆಸರ್ ಘಟಕದ ಸಮಸ್ಯೆಗೊಂದು ಅಂತ್ಯ ದೊರಕಿ ಕೆಲವು ತಿಂಗಳಲ್ಲಿ ಅತ್ಯಧಿಕ ಕಾರು ಉತ್ಪಾದನೆಯಾದರೆ ಮಾತ್ರ ಸೆಕೆಂಡ್ ಹ್ಯಾಂಡ್ ಕಾರುಗಳ ದರ ಕಡಿಮೆಯಾಗಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ. ಠುಸ್ ಅನ್ನದ ರಾಕೇಟ್ ಪಟಾಕಿ ಆಕಾಶಕ್ಕೆ ನೆಗೆದರೂ ಮತ್ತೆ ನೆಲಕ್ಕೆ ಬೀಳುತ್ತೆ!

More from DriveSpark

Article Published On: Wednesday, October 19, 2011, 17:09 [IST]
English summary
Maruti Suzuki has always been the first time buyer's car. With its low price, low maintenance and the high quality service, Maruti Suzuki has emerged as India's largest selling carmaker. This also means Maruti has a greater presence in the used car market when compared with other carmakers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+