ವಾಹನ ಬಿಡಿಭಾಗ ಕಂಪನಿಗಳ ಪ್ರಗತಿ ಇಳಿಮುಖ

ಇದೀಗ ಬಿಡಿಭಾಗ ತಯಾರಿಕಾ ಕಂಪನಿಗಳು ನಷ್ಟದತ್ತ ಮುಖ ಮಾಡಿವೆ ಎಂದು ಬಿಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ. ಕಳೆದ 6 ತಿಂಗಳಿನಿಂದ ನಿರೀಕ್ಷೆಗಿಂತ ಮಾರಾಟ ಪ್ರಮಾಣ ಕಡಿಮೆಯಾಗಿವೆ. ಈ ಅವಧಿಯಲ್ಲಿ ಶೇಕಡ 10-12ರಷ್ಟು ಪ್ರಗತಿ ನಿರೀಕ್ಷೆ ಮಾಡಲಾಗಿತ್ತು. ಆದರೆ ಕೇವಲ ಶೇಕಡ 2-4ರಷ್ಟು ಪ್ರಗತಿಯಾಗಿದೆ ಎಂದು ದೇಶದ ವಾಹನೋದ್ಯಮ ಒಕ್ಕೂಟ ವರದಿ ಮಾಡಿದೆ.
ಕಾರು ಮಾರಾಟ ಇಳಿಕೆ ಕಂಡಿರುವ ಕಾರಣ ನಾವು ಬಂಡವಾಳ ವಿಸ್ತರಣಾ ಯೋಜನೆಯನ್ನು ಮುಂದೂಡಿದ್ದೇವೆ ಎಂದು ಕಾರ್ ಏರ್ ಕಂಡಿಷನ್ ತಯಾರಿಕಾ ಕಂಪನಿ ಸುಬ್ರೊಸ್ ನ ರಮೇಶ್ ಸೂರಿ ಹೇಳಿದ್ದಾರೆ. ಕಳೆದ ವರ್ಷ ನಾವು ಅತ್ಯಧಿಕ ಪ್ರಗತಿ ಕಂಡಿದ್ದೇವು. ಆದರೆ ಈ ವರ್ಷ ಬೇಡಿಕೆ ಕಡಿಮೆಯಾಗಿ ಪ್ರಗತಿ ಇಳಿಕೆ ಕಾಣುತ್ತಿದೆ ಎಂದು ಸೆಟ್ಕೊ ಆಟೊಮೊಟಿವ್ ನಿರ್ದೇಶಕರು ಹೇಳುತ್ತಾರೆ. ದೇಶದ ಹೆಚ್ಚಿನ ವಾಹನ ಬಿಡಿಭಾಗ ತಯಾರಿಕಾ ಕಂಪನಿಗಳು ಹಿನ್ನಡೆ ಅನುಭವಿಸುತ್ತಿವೆ ಎಂದು ವಾಹನ ವಿಶ್ಲೇಷಕರು ಹೇಳುತ್ತಾರೆ.


Click it and Unblock the Notifications








