ಕಾರು ಕ್ರೇಜ್ ಕ್ರಿಕೆಟ್ ತಾರೆ ಸಚಿನ್ ಗೆ ಎಫ್1 ಆಮಂತ್ರಣ

Sachin gets personal invitation Formula One
ಕ್ರಿಕೆಟ್ ಲೋಕದ ದೇವರೆಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಗೆ ರೇಸ್ ಅಂದ್ರೂ ಇಷ್ಟ. ವೇಗದ ಕಾರುಗಳ ಶೋಕಿ ಅವರಿಗೆ ಇದೆ. ಇವರಿಗೆ ಈಗ ಫಾರ್ಮುಲಾ ಒನ್ ಇಂಡಿಯನ್ ಗ್ರಾಂಡ್ ಪ್ರಿಕ್ಸ್ ವೈಯಕ್ತಿಕ ಆಮಂತ್ರಣವೂ ದೊರಕಿದೆ.

ಫಾರ್ಮುಲಾ ಒನ್ ಮುಖ್ಯಸ್ಥ ಬೆರ್ನಿ ಎಕ್ಲೊಸ್ಟೊನ್ ಖುದ್ದಾಗಿ ಸಚಿನ್ ತೆಂಡೂಲ್ಕರ್ ಗೆ ಫಾರ್ಮುಲಾ ಒನ್ ಆಮಂತ್ರಣವನ್ನು ನೀಡಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ 2011 ಇಂಡಿಯನ್ ಗ್ರಾಂಡ್ ಪ್ರಿಕ್ಸ್ ನೋಯಿಡಾದಲ್ಲಿ ಈ ತಿಂಗಳ ಅಂತ್ಯದಲ್ಲಿ ನಡೆಯಲಿದೆ.

2000ನೆ ಇಸವಿಯಿಂದ ಸಚಿನ್ ತೆಂಡೂಲ್ಕರ್ ಫಾರ್ಮುಲಾ ಒನ್ ರೇಸ್ ಕುರಿತು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅವರಿಗೆ ಎಫ್1 ರೇಸ್ ನೇರ ಪ್ರಸಾರ ನೋಡುವುದೆಂದರೆ ತುಂಬಾ ಇಷ್ಟವಂತೆ.

ಸಚಿನ್ ಗೆ ಫಾರ್ಮುಲಾ ಒನ್ ರೇಸ್ ಆಟವೆಂದರೆ ಇಷ್ಟ. ಅದಕ್ಕಾಗಿ ಅವರು ಫೆರಾರಿ ಕಾರನ್ನು ಹೆಚ್ಚು ಇಷ್ಟಪಡುತ್ತಿದ್ದರು. ಮುಂಬೈ-ಪುಣೆ ಎಕ್ಸ್ ಪ್ರೇಸ್ ಹೆದ್ದಾರಿಯಲ್ಲಿ ವೇಗದ ಸವಾರಿ ಕೈಗೊಳ್ಳುವುದು ಸಚಿನ್ ಗೆ ಇಷ್ಟವಂತೆ. ಕೆಲವೊಮ್ಮೆ ಸಂತೋಷಕ್ಕಾಗಿ ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲೂ ಸವಾರಿ ಕೈಗೊಳ್ಳುತ್ತಾರಂತೆ.

ಸಚಿನ್ ಕಾರು ಲೋಕ: ಫೆರಾರಿ ಕಾರು ಮಾತ್ರವಲ್ಲದೇ ಸಚಿನ್ ಇಷ್ಟಪಡುವ ಕಾರು ಕಂಪನಿಗಳೆಂದರೆ ಮರ್ಸಿಡಿಸ್, ಪೊರ್ಷ್, ಬಿಎಂಡಬ್ಲ್ಯು. ಈ ಕಂಪನಿಯ ಪ್ರಮುಖ ಮಾಡೆಲ್ ಕಾರುಗಳು ಅವರಲ್ಲಿದೆ. ಅದರಲ್ಲಿ ಮರ್ಸಿಡಿಸ್ ಕಂಪನಿಯ ಎಸ್ಎಲ್ಎಸ್ ಎಎಂಜಿ ಕಾರು ಅವರಿಗಿಷ್ಟ. ಅದರೊಂದಿಗೆ ಮರ್ಸಿಡಿಸ್ ಸಿ230 ಕಾರಲ್ಲೂ ಆಗಾಗ ಸವಾರಿ ಹೊರಡುತ್ತಾರೆ. ಲ್ಯಾಂಡ್ ಕ್ರೂಷರ್ ಕೂಡ ಅವರ ನೆಚ್ಚಿನ ಕಾರು.

ಸಚಿನ್ ತೆಂಡೂಲ್ಕರ್ ಅವರ ಮೊದಲ ಕಾರು ಯಾವುದು? ನೀವು ನಂಬಲೇಬೇಕು ಅವರು ಆರಂಭದಲ್ಲಿ ಬಳಸುತ್ತಿದ್ದದ್ದು ಮಾರುತಿ 800. ಮನೆಯ ಹತ್ತಿರವಿರುವ ಸಿನಿಮಾ ಥಿಯೇಟರ್ ಗೆ ಹೋಗಲು ಇದೇ ಕಾರನ್ನು ಬಳಸುತ್ತಿದ್ದರಂತೆ. ಇದೀಗ ಅವರ ಗ್ಯಾರೆಜ್ ನಲ್ಲಿ ಸಾಕಷ್ಟು ಲಕ್ಷುರಿ ಕಾರುಗಳು ಸಾಲಾಗಿವೆ.

More from DriveSpark

Article Published On: Friday, October 21, 2011, 15:15 [IST]
English summary
Indian Cricketer Sachin Tendulkar personal invitation by Mr. Bernie Ecclestone Chief of Formula One Indian Grand Prix in Greater Noida. And also read here about Sachin Tendulkar car craze.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+