ಅಪ್ ಕಾರೆಂಬ ಗುಬ್ಬಚ್ಚಿ ಗೂಡಲ್ಲಿ ಹದಿನೈದು ಯುವತಿಯರು

Volkswagen UP
ಫೋಕ್ಸ್ ವ್ಯಾಗನ್ ಸಣ್ಣ ಕಾರು "ಅಪ್"ನಲ್ಲಿ ಒಬ್ಬ ಯುವಕನೊಂದಿಗೆ 16 ಯುವತಿಯರು ಕುಳಿತು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಪುಟ್ಟ ಕಾರಲ್ಲಿ ಇಷ್ಟು ಜನರು ಕುಳಿತುಕೊಳ್ಳಬಹುದು ಅಂತ ಕಂಪನಿ ಈ ಮೂಲಕ ನಿರೂಪಿಸಿದೆ.

ಅದು ದೇಶದ ರಸ್ತೆಗೆ ಶೀಘ್ರವಾಗಿ ಆಗಮಿಸಲಿರುವ ಕಾರು. ಹೆಸರು ಫೋಕ್ಸ್ ವ್ಯಾಗನ್ ಅಪ್. ಈ ಕಾರು ಕೇವಲ 3.54 ಮೀಟರ್ ಉದ್ದ, 1.64 ಮೀಟರ್ ಅಗಲವಿದೆ. ಈ ಕಾರಲ್ಲಿ ಹೆಚ್ಚೆಂದರೆ ನಾಲ್ಕು ಜನರು ಕುಳಿತುಕೊಳ್ಳಬಹುದು. ಆದರೆ ಕಂಪನಿಯು ಅದರಲ್ಲಿ 15 ಯುವತಿಯರನ್ನು ಮತ್ತು ಒಬ್ಬ ಯುವಕನನ್ನು ಕುಳ್ಳಿರಿಸಿದೆ.

ದೇಶದ ಬಿ ಸೆಗ್ಮೆಂಟ್ ಕಾರು ಮಾರುಕಟ್ಟೆಯಲ್ಲಿ ಹೆಚ್ಚು ಜನರ ಗಮನ ಸೆಳೆಯಲು ಕಂಪನಿ ಹೊಸ ಪ್ರಚಾರ ತಂತ್ರ ಆರಂಭಿಸಿದೆ. ಫೋಕ್ಸ್ ವ್ಯಾಗನ್ ಟೆಕ್ ಗುಣಮಟ್ಟ, ಸಣ್ಣ ಸರಳ ಸುಂದರ ವಿನ್ಯಾಸ, ದಕ್ಷತೆಯ ಎಂಜಿನ್ ಇತ್ಯಾದಿ ಫೀಚರುಗಳನ್ನು VW UP ಕಾರು ಹೊಂದಿದೆ.

ಇದು ಪುಟ್ಟ ಕಾರಾದರೂ ಒಳಗಡೆ ಸಾಕಷ್ಟು ಸ್ಥಳಾವಕಾಶವಿದೆ ಅಂತ ಕಂಪನಿ ನಿರೂಪಿಸಿದೆ. 15 ಚಂದದ ಹುಡುಗಿಯರನ್ನು ಕಾರಿನೊಳಗೆ ಕುಳ್ಳಿರಿಸಿ ಫೋಟೊ ತೆಗೆಸಿದೆ. ಥೇಟ್ ನಮ್ಮೂರಲ್ಲಿ ಪುಟ್ಟ ರಿಕ್ಷಾದಲ್ಲಿ ಜನರು ಸಾಗುವಂತೆ ಈ ಕಾರಿನ ಡಿಕ್ಕಿಯೂ ಬಿಡದಂತೆ ಯುವತಿಯರು ಗುಬ್ಬಚ್ಚಿಯಂತೆ ಕುಳಿತಿದ್ದಾರೆ.

ಅಂದ ಹಾಗೆ ಈ ಯುವತಿಯರೆಲ್ಲ ಜಾದುಗಾರರಲ್ಲ. ಫೋಕ್ಸ್ ವ್ಯಾಗನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಾಮೂಲಿ ಸಿಬ್ಬಂದಿಗಳು.. ಕಂಪನಿಯು ಎರಡು ಯುವತಿಯರನ್ನು 252 ಲೀಟರ್ ಸ್ಥಳಾವಕಾಶದ ಬೂಟ್ ಸ್ಥಳದಲ್ಲೂ ಕುಳ್ಳಿರಿಸಿದೆ.

ಉಳಿದಂತೆ 7 ಜನರು ಹಿಂದಿನ ಸೀಟಿನಲ್ಲಿ, ನಾಲ್ಕು ಜನರು ಎದುರು ಸೀಟಿನಲ್ಲಿ, ಎರಡು ಜನರು ಕಾಲಿಡುವ ಸ್ಥಳದಲ್ಲಿ, ಒಬ್ಬಳು ಡ್ಯಾಷ್ ಬೋರ್ಡ್ ನಲ್ಲಿ ಕುಳಿತಿದ್ದಾರೆ. ಇದು ದಾಖಲೆಗೆ ಮಾಡಿದ್ದಲ್ಲ. ಯಾಕೆಂದರೆ ಇದಕ್ಕೂ ಹೆಚ್ಚು ಜನರನ್ನು ಕುಳ್ಳಿರಿಸಿ ದಾಖಲೆ ಮಾಡಿದವರಿದ್ದಾರೆ. ಕಂಪನಿಯ ಪುಟ್ಟ ಕಾರು ಹೆಚ್ಚು ಸಾಮರ್ಥ್ಯ ಹೊಂದಿದೆ ಅಂತ ನಿರೂಪಿಸುವದಷ್ಟೇ ಇದರ ಉದ್ದೇಶ.

ಬಹುಶಃ ಈ ಹದಿನೈದು ಮಹಿಳೆಯರು ಹದಿನೈದು ಮಲ್ಲಿಗೆ ತೂಕದ ರಾಜಕುಮಾರಿಯಾಗಿರಬೇಕು!

More from DriveSpark

Article Published On: Monday, October 24, 2011, 12:04 [IST]
English summary
VW UP is Volkswagen group’s smallest car yet. But company is trying some innovative marketing ideas. Now company managed to fit or sit 15 women and one man inside the UP car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+