ರೇವಾದಿಂದ ಬೆಂಗಳೂರಿಗರಿಗೆ ದೀಪಾವಳಿ ಸ್ಪೆಷಲ್ ಕೊಡುಗೆ

3 ಮಾಡೆಲ್ ಗಳಲ್ಲಿ ಲಭ್ಯವಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ಕಾರು ದೀಪಾವಳಿಗೆಂದು ಗ್ರಾಹಕರಿಗೆ ರಿಯಾಯಿತಿ ನೀಡುತ್ತಿದೆ. ಬೆಂಗಳೂರಿನ ಶೋ ರೂಮ್ ನಲ್ಲಿ ಲಭ್ಯವಿರುವ ಸ್ಟಾಂಡರ್ಡ್ ಮಾಡಲ್ ಕಾರಿನ ಬೆಲೆ 3.13 ರು ಲಕ್ಷವಿದ್ದು, ದೀಪಾವಳಿಗೆಂದು ರಿಯಾಯಿತಿ ದರದಲ್ಲಿ 2.99 ರು ಲಕ್ಷಕ್ಕೆ ಮಾರಾಟ ಮಾಡುತ್ತಿದೆ.
ಅಕ್ಟೋಬರ್ 31 ರವೆರೆಗೆ ಲಭ್ಯವಿರುವ ದೀಪಾವಳಿ ಹಬ್ಬದ ರಿಯಾಯಿತಿ ಬೆಂಗಳೂರಿನಲ್ಲಿರುವವರಿಗೆ ಮಾತ್ರ ಅನ್ವಯವಾಗಲಿದೆ.
ಈ ಎಲೆಕ್ಟ್ರಿಕ್ ಕಾರನ್ನು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 80 ಕಿಲೋ ಮೀಟರ್ ನೀಡಲಿದ್ದು, ಒಂದು ಬಾರಿ ಚಾರ್ಜಿಗೆ 9 ಯುನಿಟ್ ವಿದ್ಯುತ್ ಬಳಸಿಕೊಳ್ಳುತ್ತದೆ. ಒಂದು ಯುನಿಟ್ ಗೆ 4ರು ಎಂದುಕೊಂಡರೂ, 80 ಕಿಲೋ ಮೀಟರ್ ಗೆ ಕೇವಲ 36ರು ಮಾತ್ರವಾಗುತ್ತದೆ. ಒಟ್ಟಾರೆ ಒಂದು ಕಿಲೋ ಮೀಟರ್ ಗೆ ಕೇವಲ 0.45 ರು ಮಾತ್ರ ಖರ್ಚಾಗುತ್ತದೆ. ಆದರೆ ಪೆಟ್ರೋಲ್ ಕಾರಿನಲ್ಲಿ ಇದು ಒಂದು ಕಿಲೋ ಮೀಟರ್ ಗೆ 6.66 ರು ಆಗುತ್ತದೆ.
ಪೆಟ್ರೋಲ್ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಈ ಎಲೆಕ್ಟ್ರಿಕ್ ರೇವಾ ನಿಮ್ಮ ಉತ್ತಮ ಆಯ್ಕೆಯಾಗುತ್ತದೆ.


Click it and Unblock the Notifications








