ಫಾರ್ಮುಲಾ ಒನ್ ರೇಸ್ ಕ್ರೇಜ್ ಗೆ ಟ್ರ್ಯಾಕ್ ಸಜ್ಜು

ಹೈಟೆಕ್ ತಂತ್ರಜ್ಞಾನ ಮತ್ತು ಪ್ರತಿಷ್ಟೆಯ ಸಂಕೇತವಾಗಿರುವ ಫಾರ್ಮುಲಾ 1 ರೇಸ್ ಅಕ್ಟೋಬರ್ 30 ರಂದು ಭಾನುವಾರ ದೆಹಲಿಯ ಹೊರವಲಯದ ನೋಯ್ಡಾದಲ್ಲಿರುವ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್ ನಲ್ಲಿ ಜರುಗಲಿದೆ.
ವಿಶ್ವದ 12 ಶ್ರೇಷ್ಟ ತಂಡಗಳು ಸೆಣಸಾಡಲಿರುವ ಈ ರೇಸ್ ಟ್ರಯಲ್ ಡ್ರೈವ್ ಶುಕ್ರವಾರವೇ ನಡೆದಿದೆ.
ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್: ಭಾರತದಲ್ಲಿ ಪ್ರಪ್ರಥಮವಾಗಿ ನಡೆಯುತ್ತಿರುವ ಫಾರ್ಮುಲಾ ಒನ್ ರೇಸ್ ಗೆ ಸಜ್ಜಾಗಿರುವ ಬುದ್ಧ ಇಂಟರ್ ನ್ಯಾಷನಲ್ ಸರ್ಕ್ಯೂಟ್ ಟ್ರ್ಯಾಕ್ ಅನ್ನು ಪ್ರಸಿದ್ಧ ಜರ್ಮನ್ ಎಫ್ 1 ಟ್ರ್ಯಾಕ್ ಇಂಜಿನಿಯರ್ ಹರ್ಮನ್ ಟಿಲ್ಕೆ ವಿನ್ಯಾಸಗೊಳಿದ್ದಾರೆ. 875 ಎಕರೆಯಲ್ಲಿ, $ 10 ಬಿಲಿಯನ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರ ಸರ್ಕ್ಯೂಟ್ 5.137 ಕಿಲೋ ಮೀಟರ್ ಇದ್ದು, 16 ಕಾರ್ನರ್ ಹೊಂದಿದೆ. ಟ್ರ್ಯಾಕ್ ಅಗಲ 18 ಮೀಟರ್ ನಿಂದ 20 ಮೀಟರ್ ಇದೆ.
ಈ ಟ್ರ್ಯಾಕ್ ನಲ್ಲಿ ಕಾರು ಗಂಟೆಗೆ 210 ಕಿಮಿ ವೇಗ, ಗರಿಷ್ಠ 320 ಕಿಮೀ ವೇಗದಲ್ಲಿ ಚಲಿಸಲಿದ್ದು, ಮೋಂಜಾ ನಂತರದ ಅತಿ ವೇಗದ ರೇಸ್ ಟ್ರ್ಯಾಕ್ ಹೊಂದಿರುವ ಖ್ಯಾತಿ ಪಡೆದುಕೊಂಡಿದೆ.


Click it and Unblock the Notifications








