ಮುಂದಿನ ವರ್ಷದವರೆಗೂ ಕಾರು ತೊಗೋಬಾರದಂತೆ!

Do not buy cars until next year
ಈ ಕಾರಿಗೆ ಆಫರ್ ಇದೆಯಂತೆ, ಈಗಲೇ ಬುಕ್ ಮಾಡೋಣ ಅಂತ ನೀವು ಯೋಚಿಸುತ್ತಿದ್ದೀರಾ? ಹಾಗಾದರೆ ಕೊಂಡುಕೊಳ್ಳುವ ಮುನ್ನ ಒಮ್ಮೆ ಯೋಚಿಸಿ.

ಹಬ್ಬದ ದಿನಗಳಲ್ಲಿ ಕಾರು ತಯಾರಕರು ಗ್ರಾಹಕರಿಗೆಂದೇ ವಿಶೇಷ ರಿಯಾಯಿತಿಗಳನ್ನು ನೀಡುತ್ತಾರೆ. ಉಚಿತ ಇನ್ಸುರೆನ್ಸ್, ವಾರೆಂಟಿ ವಿಸ್ತರಣೆ ಮತ್ತು ಉಚಿತ ಬಿಡಿಭಾಗವನ್ನು ಕೂಡ ನೀಡಲಾಗುತ್ತೆ. ಇದೇ ಕಾರಣಕ್ಕೆ ನೀವು ಈ ವರ್ಷವೇ ಕಾರನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೀರೆಂದರೆ ಇದರ ಹಿಂದಿನ ತೊಂದರೆಯನ್ನೂ ಲೆಕ್ಕಿಸಬೇಕು.

ನೀವೇ ಯೋಚಿಸಿ. ಹಬ್ಬದ ದಿನಗಳು ಅಕ್ಟೋಬರ್ ನಿಂದ ಆರಂಭಗೊಂಡು ದೀಪಾವಳಿಯಲ್ಲಿ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ರಿಯಾಯಿತಿ ಹೆಚ್ಚು. ಕ್ರಿಸ್ ಮಸ್ ಸಮಯದಲ್ಲೂ ಸ್ವಲ್ಪ ರಿಯಾಯಿತಿ ಲಭ್ಯ. ಹೊಸ ವರ್ಷದ ನಂತರ ರಿಯಾಯಿತಿಗಳು ಮಾಯವಾಗಿರುತ್ತವೆ. ಇದಕ್ಕೆ ಕಾರಣವೂ ಇದೆ.

ಕಾರು ತಯಾರಕರು ತಮ್ಮ ವಾರ್ಷಿಕ ಮಾರಾಟ ಗುರಿಯನ್ನು ಮುಟ್ಟುವ ಸಲುವಾಗಿ ಈ ಕೊನೆಯ 3 ತಿಂಗಳಿನಲ್ಲಿ ಹೆಚ್ಚು ಆಫರ್ ನೀಡುತ್ತಾರೆ. ಅದರಿಂದ ನಮಗೇನು ನಷ್ಟ ಎಂದು ನೀವು ಕೇಳುವುದಾದರೆ, ನೀವು ಖರೀದಿಸಿದ ಕಾರು ಬೇಸರವೆನಿಸಿ ಮರು ಮಾರಾಟಮಾಡುವಾಗ ನಿಮಗೆ ಕಡಿಮೆ ಬೆಲೆ ಲಭಿಸುತ್ತದೆ.

ಕಾರನ್ನು ಖರೀದಿಸಿದ ವರ್ಷದ ಮೇಲೆ ಮರುಮಾರಾಟದ ಲೆಕ್ಕವಿರುತ್ತದೆ. ನೀವು ಕಾರನ್ನು 2011ರ ಜನವರಿಯಲ್ಲಿ ತೆಗೆದುಕೊಂಡರೂ, ಡಿಸೆಂಬರ್ ಗೆ ಖರೀದಿಸಿದರೂ, ಖರೀದಿಸಿದ ವರ್ಷ 2011 ಎಂದೇ ಇರುತ್ತದೆ.

ಇಂತಹ ಪಕ್ಷದಲ್ಲಿ ಅಕ್ಟೋಬರ್ ಅಥವಾ ಡಿಸೆಂಬರ್ ಗೆ ಕಾರು ಖರೀದಿಸುವ ಬದಲು ಸ್ವಲ್ಪ ಕಾದು 2 ತಿಂಗಳ ನಂತರ ತೆಗೆದುಕೊಂಡರೆ 2012ಕ್ಕೆ ಖರೀದಿಸಿದ ವರ್ಷ ದಾಖಲಾಗುತ್ತದೆ. ತಕ್ಷಣದ ಬೆಲೆ ನಿರ್ಧರಿಸಿ ವಾಹನ ಕೊಂಡುಕೊಳ್ಳಲು ನಿರ್ಧರಿಸುವಾಗ, ನಿಮ್ಮ ಕಾರಿನ ಮರು ಮಾರಾಟ ಇಯರ್ ಆಫ್ ಪರ್ಚೇಸ್ ಮೇಲೆ ಅವಲಂಬಿತವಾಗಿದೆ ಎನ್ನುವುದನ್ನು ಮರೆಯಬೇಡಿ.

More from DriveSpark

Article Published On: Saturday, October 29, 2011, 16:40 [IST]
English summary
Carmakers are offering huge discounts during this festive season. But are you really in a hurry to buy a car this year? The reason why we are asking this question is because, while there are some advantages buying cars when such discounts are available, there are some factors that may have a negative impact too. Take a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+