ಗ್ರಾಹಕ ತೃಪ್ತಿ ವಿಷ್ಯದಲ್ಲಿ ಮಾರುತಿ ಸುಜುಕಿಗೆ ಅಗ್ರಸ್ಥಾನ

"2011ರ ವರ್ಷದಲ್ಲೂ ಡೀಲರ್ ಸೇವೆ ಸೇರಿದಂತೆ ಗ್ರಾಹಕ ತೃಪ್ತಿ ವಿಷ್ಯದಲ್ಲಿ ಮಾರುತಿ ಸುಜುಕಿ 879 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದೆ. ಕಂಪನಿಯು ತನ್ನ ಸೇವೆಯ ಗುಣಮಟ್ಟ ಹೆಚ್ಚಿಸಿಕೊಂಡು ಮತ್ತೆ ಮತ್ತೆ ಅಗ್ರ ಸ್ಥಾನ ಪಡೆಯುತ್ತಿದೆ" ಎಂದು ಜೆಡಿ ಪವರ್ ವರದಿಯಲ್ಲಿ ತಿಳಿಸಿದೆ.
ಒಟ್ಟಾರೆ ಒಂದು ಸಾವಿರ ಅಂಕಗಳ ಮೂಲಕ ಗ್ರಾಹಕ ತೃಪ್ತಿ ಸಮೀಕ್ಷೆ ನಡೆಸಲಾಯಿತು. ಸುಮಾರು 6,821 ಕಾರು ಮಾಲೀಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಮಾರುತಿ ಅಗ್ರ ಸ್ಥಾನ ಪಡೆದಿದೆ.
ಒಟ್ಟಾರೆ ಗ್ರಾಹಕ ತೃಪ್ತಿ ಆಯ್ಕೆಗೆ ಐದು ಪ್ರಮುಖ ಮಾನದಂಡಗಳನ್ನು ಬಳಸಿಕೊಳ್ಳಲಾಗಿದೆ. ಸೇವಾ ಗುಣಮಟ್ಟ, ವಾಹನ ಪಿಕಪ್, ಸೇವಾ ಸಲಹೆಗಳು, ಸೇವಾ ಸೌಲಭ್ಯಗಳು ಇವುಗಳಲ್ಲಿ ಪ್ರಮುಖ ಮಾನದಂಡಗಳಾಗಿವೆ.
ಗ್ರಾಹಕ ತೃಪ್ತಿಯಲ್ಲಿ ಎರಡನೇ ಅಗ್ರಸ್ಥಾನವನ್ನು ಹೋಂಡಾ ಸಿಯೆಲ್ಸ್ ಕಾರ್ಸ್ ಪಡೆದಿದೆ. ಜನರಲ್ ಮೋಟರ್ಸ್ ಮತ್ತು ಫೋಕ್ಸ್ ವ್ಯಾಗನ್ ಜೊತೆಯಾಗಿ ಮೂರನೇ ಸ್ಥಾನ ಹಂಚಿಕೊಂಡಿವೆ.


Click it and Unblock the Notifications








