ಹ್ಯುಂಡೈ ಅಕ್ಟೋಬರ್ ಮಾರಾಟ ಶೇಕಡ 7.5ರಷ್ಟು ಇಳಿಕೆ

Hyundai Motor October 2011 sales
ದೇಶದ ಎರಡನೇ ಬೃಹತ್ ಕಾರು ತಯಾರಿಕಾ ಕಂಪನಿ ಹ್ಯುಂಡೈ ಮೋಟರ್ಸ್ ಕಳೆದ ತಿಂಗಳ ವಾಹನ ಮಾರಾಟ ಶೇಕಡ 7.5ರಷ್ಟು ಇಳಿಕೆ ಕಂಡಿದೆ. ಮಾರುಕಟ್ಟೆಯಲ್ಲಿನ ನಕಾರಾತ್ಮಕ ಭಾವನೆಯಿಂದ ಹಬ್ಬದ ಸೀಸನಿನಲ್ಲಿ ಕಾರು ಮಾರಾಟ ಏರಿಕೆ ಕಂಡಿಲ್ಲವೆಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಹ್ಯುಂಡೈ ಮೋಟರ್ ಅಕ್ಟೋಬರ್ 2011ರಲ್ಲಿ ಒಟ್ಟು 48,325 ಯೂನಿಟ್ ಕಾರು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕಂಪನಿಯ ಕಾರು ಮಾರಾಟ 52,217 ಯುನಿಟ್ ಆಗಿತ್ತು. ದಕ್ಷಿಣ ಕೊರಿಯಾದ ಕಂಪನಿಯು ಇತ್ತೀಚೆಗೆ ನೂತನ ಸಣ್ಣಕಾರು ಇಯಾನ್ ಅನಾವರಣ ಮಾಡಿತ್ತು.

ಹೊಸ ಸಣ್ಣಕಾರು ಇಯಾನ್ ಹೊರತಂದ ಹಿನ್ನಲೆಯಲ್ಲಿ ಕಂಪನಿಯು ಮಾರಾಟ ಏರಿಕೆ ಕಾಣುವ ನಿರೀಕ್ಷೆಯನ್ನು ಹಿಂದೆ ವ್ಯಕ್ತಪಡಿಸಿತ್ತು. ಆದರೆ ಇಂಧನ ದರ, ಬಡ್ಡಿದರ ಇತ್ಯಾದಿಗಳು ಗ್ರಾಹಕರ ಮೇಲೆ ಸಕಾರಾತ್ಮಕ ಪರಿಣಾಮ ಬೀರಿಲ್ಲವೆಂದು ಕಂಪನಿ ಹೇಳಿದೆ.

ಕಂಪನಿಯ ನೂತನ ಕಾರು ಇಯಾನ್ ಕುರಿತು ಹೆಚ್ಚು ಗ್ರಾಹಕರು ಆಸಕ್ತಿ ವಹಿಸುತ್ತಿದ್ದಾರೆ. ಈಗಾಗಲೇ ಸುಮಾರು 9 ಸಾವಿರ ಗ್ರಾಹಕರು ಇಯಾನ್ ಬುಕ್ಕಿಂಗ್ ಮಾಡಿದ್ದಾರೆ ಎಂದು ಕಂಪನಿ ಹೇಳಿದೆ. ಈ ಕಾರಣದಿಂದ ಕಂಪನಿಯ ನವೆಂಬರ್ ಮಾರಾಟ ಅತ್ಯುತ್ತಮವಾಗಿರಲಿದೆ ಎಂಬ ಜ್ಯೋತಿಷ್ಯವನ್ನು ನಾವು ಈಗಲೇ ಹೇಳಬಹುದಾಗಿದೆ.

More from DriveSpark

Article Published On: Wednesday, November 2, 2011, 17:17 [IST]
English summary
India's second highest selling carmaker Hyundai Motors has posted a 7.5 per cent drop in its October sales. The South Korean carmaker which launched the new Eon small car said the festive season was not able to push sales due to an over all negative sentiment in the market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+