ಮಾರುತಿ, ಹ್ಯುಂಡೈ, ಷೆವರ್ಲೆ ಕಾರುಗಳಿಗೆ ಆಫರುಗಳ ಸುರಿಮಳೆ

ದರ ಕಡಿಮೆ ಮಾಡೋಕ್ಕೆ ಇನ್ನೊಂದು ಕಾರಣ ಸದ್ಯದ ಪೆಟ್ರೋಲ್ ದರ ಏರಿಕೆ. ಪೆಟ್ರೋಲ್ ದರ ದುಬಾರಿಯಾಗುತ್ತಿರುವುದರಿಂದ ಹೆಚ್ಚಿನ ಜನರು ಡೀಸೆಲ್ ಕಾರುಗಳತ್ತ ಮುಖ ಮಾಡುತ್ತಾರೆ. ಮತ್ತೆ ಜನರನ್ನು ಪೆಟ್ರೋಲ್ ಕಾರಿನತ್ತ ಸೆಳೆಯಲು ಪೆಟ್ರೋಲ್ ಕಾರುಗಳಿಗೆ ಕಂಪನಿಗಳು ವಿನಾಯಿತಿ ಘೋಷಿಸುತ್ತಿವೆ ಎನ್ನಲಾಗಿದೆ.
ಮಾರುತಿ ಕಾರುಗಳಿಗೂ ಬಂಪರ್ ಡಿಸ್ಕೌಂಟ್ ನೀಡಲಾಗಿದೆ ಎಂದು ವರದಿಗಳು ಹೇಳಿವೆ. ನೂತನ ಎಸ್ಟಿಲೊ ಕಾರನ್ನು ಕಂಪನಿಯು 2.65 ಲಕ್ಷ ರು.ಗೆ(ತೆರಿಗೆ ಸೇರಿಲ್ಲ) ನೀಡುತ್ತಿದೆಯಂತೆ. ಇದು ಎಕ್ಸ್ ಶೋರೂಂ ದರ.
ಮಾರುತಿ ಮಾತ್ರವಲ್ಲದೇ ಫಿಯೆಟ್ ಮತ್ತು ಹ್ಯುಂಡೈ ಕಂಪನಿಗಳು ಕೂಡ ಕಾರು ದರಗಳನ್ನು ತಗ್ಗಿಸುತ್ತಿವೆ. ಇದರೊಂದಿಗೆ ಗ್ರಾಹಕರಿಗೆ ಪೆಟ್ರೋಲ್ ಕಾರುಗಳಿಗೆ ಕಡಿಮೆ ಬಡ್ಡಿದರಕ್ಕೆ ಸಾಲವನ್ನು ನೀಡಲು ಮುಂದೆ ಬಂದಿವೆ. ಫಿಯೆಟ್ ಪುಂಟೊ, ಷೆವರ್ಲೆ ಸ್ಪಾರ್ಕ್ ಮತ್ತು ಹ್ಯುಂಡೈ ಅಸೆಂಟ್ ಕಾರುಗಳ ದರ ಈಗ ಕಡಿಮೆಯಾಗಿದೆ.
ಹೆಚ್ಚಿನ ಕಂಪನಿಗಳು ಎಷ್ಟು ರುಪಾಯಿ ವಿನಾಯಿತಿ ಮಾಡಲಾಗಿದೆ ಎಂದು ಖಚಿತವಾಗಿ ತಿಳಿಸಿಲ್ಲ. ಕಾರು ಖರೀದಿಸಬೇಕೆಂದವರು ಹತ್ತಿರದ ಶೋರೂಂ ಪ್ರವೇಶಿಸಿ ವಿಚಾರಿಸಿದರೆ ಸ್ಪಷ್ಟ ಚಿತ್ರಣ ಸಿಗಬಹುದು. ಆದರೆ ಹಲವು ಸಾವಿರ ರುಪಾಯಿ ಡಿಸ್ಕೌಂಟ್ ಇರೋದಂತು ಗ್ಯಾರಂಟಿ ಎಂದು ವರದಿಗಳು ಹೇಳಿವೆ.


Click it and Unblock the Notifications








