ಸ್ಮಗ್ಲರ್ ವಿಮಾನವನ್ನು ಕಾರಲ್ಲಿ ಬೆನ್ನಟ್ಟಿ ಹಿಡಿದ ಪೊಲೀಸ್
ಟೋಟಲಿ ಕನ್ ಫ್ಯೂಸ್ ಆಗುತ್ತಿದೆಯೇ? ಆಕಾಶದಲ್ಲಿ ಹಾರುವ ವಿಮಾನವನ್ನು ನೆಲದಲ್ಲಿ ಸಾಗುವ ಕಾರಿನಲ್ಲಿ ಹೇಗೆ ಬೆನ್ನೆಟ್ಟಿದ್ದು ಅಂತ. ಪೂರ್ತಿ ವಿವರ ಓದಿ. ಬ್ರೆಝಿಲಿನ ಜಾನ್ ಮೆಕ್ಲೆನ್ ಎಂಬ ಪೊಲೀಸ್ ಅಧಿಕಾರಿ ಈ ಸಾಹಸ ಘಟನೆಯ ನಾಯಕ. ಇದರ ವಿಡಿಯೋ ಕ್ಲಿಪ್ ಕೂಡ ಗೂಗಲ್ ನಲ್ಲಿ ದೊರಕುತ್ತದೆ.
ಸ್ಮಗ್ಲರ್ ಗಳ ತಂಡ ಸಣ್ಣ ಬಿಳಿ ಬಣ್ಣದ ವಿಮಾನವೊಂದರಲ್ಲಿ ಸರಕು ಕಳ್ಳಸಾಗಣಿಕೆ ಮಾಡುತ್ತಿದ್ದಾರೆ ಎಂಬ ಸುದ್ದಿ ಅಲ್ಲಿನ ಪೊಲೀಸ್ ಇಲಾಖೆಗೆ ದೊರಕಿದೆ. ತಕ್ಷಣ ಕಾರ್ಯಪ್ರವೃತವಾದ ತಂಡ ಆ ವಿಮಾನ ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಆದರೆ ಪೊಲೀಸರು ಅಲ್ಲಿಗೆ ತಲುಪಿದ ಕ್ಷಣದಲ್ಲಿ ಆ ವಿಮಾನ ಹಾರಲು ಸಿದ್ಧವಾಗಿತ್ತು.
ತಕ್ಷಣ ಸಿನಿಮಯ ಎಂಬಂತೆ ಜಾನ್ ಮೆಕ್ಲನ್ ಎಂಬ ಗಂಡೆದೆಯ ಪೊಲೀಸ್ ಅಧಿಕಾರಿ ತನ್ನ ಕಾರಿನ ಮೂಲಕ ರನ್ ವೇಗೆ ಧಾವಿಸಿದ್ದಾನೆ. ಇನ್ನೇನು ಟೇಕಾಫ್ ಆಗಲಿರುವ ವಿಮಾನದ ದೊಡ್ಡ ರೆಕ್ಕೆಗೆ ಹೋಗಿ ಕಾರನ್ನು ಡಿಕ್ಕಿ ಹೊಡೆಸಿದ್ದಾನೆ. ತಕ್ಷಣ ಸುತ್ತಲೂ ಸುತ್ತುವರೆದ ಪೊಲೀಸರು ಸ್ಮಗ್ಲರುಗಳನ್ನು ಬಂಧಿಸಿದ್ದಾರೆ.
ಕಾರು ಚಾಲನೆ ಒಂದು ಕಲೆ. ಈ ಪೊಲೀಸ್ ತಂಡದಲ್ಲಿದ್ದ ಮೆಕ್ಲೆನ್ ಕೂಡ ಅತ್ಯುತ್ತಮ ಚಾಲಕನಾಗಿದ್ದ. ಇದನ್ನು ಗುರುತಿಸಿದ್ದ ಪೊಲೀಸ್ ತಂಡ ವಿಮಾನಕ್ಕೆ ಡಿಕ್ಕಿ ಹೊಡೆಯುವ ಸಾಹಸಿ ಅಪಾಯಕಾರಿ ಕೆಲಸವನ್ನು ಮೆಕ್ಲೆನ್ ಗೆ ವಹಿಸಿತ್ತು. ಸುರಕ್ಷಿತವಾಗಿ ಕಾರು ಚಾಲನೆ ಮಾಡುವ ಇವರ ಕಲೆಯೇ ಸ್ಮಗ್ನರ್ ಗಳನ್ನು ಹಿಡಿಯಲು ನೆರವಾಯಿತು ಎಂದು ಅಲ್ಲಿನ ಪೊಲೀಸ್ ಇಲಾಖೆ ಹೇಳಿದೆ. ಅಂದಹಾಗೆ ಸುರಕ್ಷಿತ ಸವಾರಿಗೆ ಬೇಕಾದ ಸಲಹೆಗಳನ್ನು ಓದಿದ್ದಿರಾ?
ಸುರಕ್ಷಿತ ವಾಹನ ಸವಾರಿಗೆ ಸಲಹೆಗಳು
* ವೇಗದ ಮಿತಿ ಕಾಪಾಡಿಕೊಳ್ಳಿ
* ಕುಡಿದು ವಾಹನ ಚಲಾಯಿಸದಿರಿ.
* ಕಾರಿನಲ್ಲಿ ಸೀಟು ಬೆಲ್ಟ್ ಹಾಕಲು ಮರೆಯದಿರಿ.
* ಸಿಗ್ನಲ್ ಜಂಪ್ ಮಾಡಬೇಡಿ.
* ವಾಹನವನ್ನು ಹೆಚ್ಚು ಹೊತ್ತು ನಿಲ್ಲಿಸಬೇಕಾದ ಸಮಯದಲ್ಲಿ ಹ್ಯಾಂಡ್ ಬ್ರೇಕ್ ಹಾಕಲು ಮರೆಯದಿರಿ.
* ಕಾರಿನಲ್ಲಿ ಸಾಕಷ್ಟು ಪೆಟ್ರೊಲ್/ ಡೀಸಲ್ ಇದೆ ಎಂಬುದನ್ನು ಖಚಿತಪಡಿಸಿಕೊಂಡು ಪ್ರಯಾಣಿಸಿ.
* ಟೈರ್ ಸುರಕ್ಷತೆ ಗಮನದಲ್ಲಿರಲಿ.
* ಮಳೆಗಾಲದಲ್ಲಿ ವೈಪರ್ ಕುರಿತು ಎಚ್ಚರಿಕೆಯಿರಲಿ.
* ವಾಹನದ ಗಾಜು ಶುಭ್ರವಾಗಿರಲಿ. ಎದುರಿನ ರಸ್ತೆ ಶುಭ್ರವಾಗಿ ಕಾಣುವಂತ್ತಿರಲಿ.
* ಅಡ್ಡ ರಸ್ತೆ, ಉಬ್ಬು ತಗ್ಗು ಇರುವ ರಸ್ತೆಗಳಲ್ಲಿ ವಾಹನಗಳನ್ನು ಓವರ್ ಟೆಕ್ ಮಾಡದಿರಿ.
* ಇಕ್ಕಟ್ಟಾದ ಸ್ಥಳದಲ್ಲೂ ಓವರ್ ಟೆಕ್ ಒಳ್ಳೆಯದಲ್ಲ.
* ಜೋರಾಗಿ ಮ್ಯೂಸಿಕ್ ಹಾಕಿ ಡ್ರೈವ್ ಮಾಡದಿರಿ. ಹೀಗೆ ಮಾಡಿದರೆ ಹೊರಗಿನ ಸದ್ದು, ಹಾರ್ನ್ ಕೇಳಿಸದು.
* ವಾಹನ ನಿಮ್ಮದಾಗಿರಬಹುದು, ರಸ್ತೆ, ರಸ್ತೆಯಲ್ಲಿರುವರ ಪ್ರಾಣ ನಿಮ್ಮದಲ್ಲ. ನೆನಪಿರಲಿ
* ಯಾವುದಾದರೂ ಕಡೆಗೆ ವಾಹನ ತಿರುಗಿಸುವಾಗ ಇಂಡಿಕೇಟರ್ ಹಾಕಿರಿ.
* ವಾಹನ ಚಲಾಯಿಸುವಾಗ ತಾಂತ್ರಿಕ ಸಮಸ್ಯೆಗಳು ಕಂಡುಬಂದರೆ ಎಚ್ಚರಿಕೆಯಿಂದ ನಿಭಾಯಿಸಿ.
* ಕಾರಿನಲ್ಲಿ ಓವರ್ ಲೋಡ್ ಮಾಡದಿರಿ.


Click it and Unblock the Notifications









