ನಿಮ್ಮ ಕಾರಿನಲ್ಲಿ ಎಬಿಎಸ್ ಯಾಕಿರಬೇಕು?

Why Must Your Car Have ABS
ನೀವು ಹೆಚ್ಚಾಗಿ ಕಾರು ಖರೀದಿಸುವಾಗ ಅದರ ದರ, ಸ್ಥಳಾವಕಾಶ, ವಿನ್ಯಾಸ ಇತ್ಯಾದಿಗಳನ್ನು ಗಮನಿಸುತ್ತೀರಿ. ಆದರೆ ಹೆಚ್ಚಿನವರು ಇನ್ನೊಂದು ಪ್ರಮುಖ ಅಂಶವನ್ನು ಮರೆಯುತ್ತಾರೆ. ಅದು ಸುರಕ್ಷತೆ.

ಹಿಂದಿನ ಕಾಲದ ಕಾರುಗಳಲ್ಲಿ ಸುರಕ್ಷತೆಯ ಫೀಚರುಗಳು ಕಡಿಮೆಯಿದ್ದವು. ಆದರೆ ಇದೀಗ ಮಾರುಕಟ್ಟೆಯಲ್ಲಿರುವ ಹೆಚ್ಚಿನ ಕಾರುಗಳು ನೂತನ ಸುರಕ್ಷತೆಯ ಫೀಚರುಗಳೊಂದಿಗೆ ಆಗಮಿಸುತ್ತಿವೆ. ಕೆಲವು ಎಂಟ್ರಿ ಲೆವೆಲ್ ಕಾರುಗಳಲ್ಲಿ ಸ್ಟಾಂಡರ್ಡ್ ಫೀಚರುಗಳು ಇರುವುದಿಲ್ಲ. ಅಂತಹ ಕಾರು ಖರೀದಿಸಿದ ನಂತರ ಗ್ರಾಹಕರೇ ಸುರಕ್ಷಿತ ಫೀಚರುಗಳನ್ನು ಅಳವಡಿಸಿಕೊಳ್ಳಬಹುದು.

ಸುರಕ್ಷಿತ ಸವಾರಿಗೆ ಎಬಿಎಸ್ ಮುಂತಾದ ಸೇಫ್ಟಿ ಫೀಚರ್ಸ್ ಅತ್ಯಂತ ಅಗತ್ಯ. ಎಬಿಎಸ್ ಅಂದ್ರೆ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್. ಇದು ನಿಮ್ಮ ಕಾರಿನ ಬ್ರೇಕ್ ಹಿಡಿತದಲ್ಲಿಟ್ಟುಕೊಳ್ಳುವ ಗ್ಯಾಡ್ಜೆಟ್. ಅತ್ಯಧಿಕ ವೇಗದಲ್ಲಿ ಕಾರು ಚಲಾಯಿಸಿ ತಕ್ಷಣ ಬ್ರೇಕ್ ಹಾಕಿದಾಗ ಸ್ಕಿಡ್ ಆಗುವುದನ್ನು ಇದು ತಪ್ಪಿಸುತ್ತದೆ.

ತಕ್ಷಣ ಬ್ರೇಕ್ ಹಾಕಿದಾಗ ನಿಲ್ಲುವ ಸ್ಥಳಾವಕಾಶ(ಸ್ಟಾಪಿಂಗ್ ಡಿಸ್ಟೆನ್ಸ್) ಕಡಿಮೆ ಮಾಡುತ್ತದೆ. ಬ್ರೇಕ್ ಹಾಕಿದ ನಂತರ ಕಾರು ಚಲಿಸುವ ದೂರವನ್ನು ಸ್ಟಾಪಿಂಗ್ ಡಿಸ್ಟೆನ್ಸ್ ಎನ್ನಲಾಗುತ್ತದೆ.

ಎಬಿಎಸ್ ಎನ್ನುವುದು ನಿಮ್ಮ ಕಾರಿಗೆ ಅತ್ಯಂತ ಅಗತ್ಯವಾದ ಆಕ್ಸೆಸರಿ. ಕೆಲವು ಬೈಕುಗಳು ಕೂಡ ಈಗ ಎಬಿಎಸ್ ಫೀಚರ್ಸ್ ನೊಂದಿಗೆ ಬರುತ್ತಿವೆ. ಬೈಕ್ ಸ್ಕಿಡ್ ಆಗದಂತೆ ನೋಡಿಕೊಳ್ಳಲು ಎಬಿಎಸ್ ನೆರವಾಗುತ್ತದೆ.

ಕೆಲವು ದೇಶಗಳಲ್ಲಿ ಎಬಿಎಸ್ ಫೀಚರ್ಸ್ ಅಳವಡಿಸುವುದು ಕಡ್ಡಾಯವಾಗಿದೆ. ಆದರೆ ಭಾರತದಲ್ಲಿ ಇದು ಇನ್ನೂ ಕಡ್ಡಾಯವಾಗಿಲ್ಲ. ಇಷ್ಟವಿರುವರು ಹಾಕಿಕೊಳ್ಳಬಹುದು. ಸದ್ಯ ಭಾರತದಲ್ಲಿ ನಡೆಯುವ ಅಪಘಾತಗಳ ಅಂಕಿಅಂಶಗಳನ್ನು ನೋಡಿದರೆ ಎಬಿಎಸ್ ಕಡ್ಡಾಯಗೊಳಿಸುವುದು ಒಳ್ಳೆಯದು ಎಂದೆನಿಸುತ್ತದೆ.

More from DriveSpark

Article Published On: Tuesday, November 8, 2011, 16:53 [IST]
English summary
Why Must Your Car Have ABS? ABS or anti lock braking system is a gadget that controls your car's brakes and prevent locking up of wheels even while braking. ABS was developed to prevent a car from sliding after brakes are applied at high speeds. The ABS will allow the wheels to move as per the requirement of the driver even while slowing down in a controlled manner.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+