ಮಾರುತಿ ಆಲ್ಟೊ ಎಕ್ಸ್ ಪ್ಲೋರ್ ರಸ್ತೆಗೆ, ದರ 2.32 ಲಕ್ಷ ರು.

ಕಂಪನಿ ಈಗಾಗಲೇ ನೌಕರರ ಕಿರಿಕಿರಿಯಿಂದ ಮಾರುಕಟ್ಟೆ ಪಾಲು ಕಳೆದುಕೊಳ್ಳುತ್ತಿದೆ. ಮಾನೆಸರ್ ಘಟಕದಲ್ಲಿ ಮತ್ತೆ ನೌಕರರು ಪ್ರತಿಭಟನೆ ಆರಂಭಿಸಿದ್ದಾರೆ. ಈಗಾಗಲೇ ಸ್ವಿಫ್ಟ್ ಕಾರಿನ ಬುಕ್ಕಿಂಗ್ ಹೆಚ್ಚಾಗಿದ್ದು, ವೇಟಿಂಗ್ ಪಿರೆಯಿಡ್ ಕೂಡ ಹೆಚ್ಚಾಗಿದೆ. ಆದರೂ ಕಂಪನಿಯು ಹೊಸ ಲಿಮಿಟೆಡ್ ಅಡಿಷನ್ ಮೂಲಕ ಗ್ರಾಹಕರನ್ನು ಸೆಳೆಯಲು ಯತ್ನಿಸುತ್ತಿದೆ.
ಕಂಪನಿಯು ಲಿಮಿಟೆಡ್ ಅಡಿಷನ್ ಆಲ್ಟೋ ಕಾರನ್ನು ಹಬ್ಬದ ಸೀಸನ್ ಸ್ಪೆಷಲ್ ಆಗಿ ಹೊರತಂದಿದೆ. ಈಗಾಗಲೇ ಹ್ಯುಂಡೈ ಇಯಾನ್ ರಸ್ತೆಗಿಳಿದಿದೆ. ಇದಕ್ಕೆ ಸಮರ್ಥ ಪೈಪೋಟಿ ನೀಡುವುದು ಕೂಡ ಕಂಪನಿಯ ಉದ್ದೇಶ ಎನ್ನಲಾಗಿದೆ.
ನೂತನ ಲಿಮಿಟೆಡ್ ಅಡಿಷನ್ ಆಲ್ಟೊ ಎಲ್ಎಕ್ಸ್ಐ ಮತ್ತು ಆಲ್ಟೊ ಕೆ10 ವಿಎಕ್ಸ್ಐ ಆವೃತ್ತಿಯಲ್ಲಿ ದೊರಕುತ್ತಿದೆ. ಇದು ಆರು ಬಣ್ಣದಲ್ಲಿ ದೊರಕುತ್ತದೆ. ಇದರಲ್ಲಿ ಯುಎಸ್ ಬಿ, ಬ್ಲೂಟೂಥ್, ಲೆದರ್ ಸೀಟ್, ಹೊಸ ಬಾಡಿ ಗ್ರಾಫಿಕ್ಸ್, ಹೊಸ ಬಣ್ಣದ ಬಂಪರುಗಳು, ಒಆರ್ ವಿಎಂ ಮತ್ತು ಹೊಸ ಡೋರ್ ಹ್ಯಾಂಡಲ್ ಮತ್ತು ಸ್ಪೋರ್ಟಿ ರೂಫ್ ಇವೆ. ಇವೆಲ್ಲ ಆಲ್ಟೊ ಕಾರಿಗೆ ಹೊಸ ಫೀಚರುಗಳಾಗಿವೆ.
ನೂತನ ಆಲ್ಟೊ ಲಿಮಿಟೆಡ್ ಅಡಿಷನ್ ಆರಂಭಿಕ ದರ ಸುಮಾರು 2.32 ಲಕ್ಷ ರುಪಾಯಿ ಇದೆ. ಇದು ಎಕ್ಸ್ ಶೋರೂಂ ದೆಹಲಿ ದರ. ನೂತನ ಕಾರು ಪ್ರತಿಲೀಟರ್ ಗೆ 20.2 ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದು ಸಿಎನ್ ಜಿ ಆವೃತ್ತಿಯಲ್ಲೂ ದೊರಕುತ್ತದೆ.


Click it and Unblock the Notifications








