ಬಿಎಂಡಬ್ಲ್ಯು ಇಂಡಿಯಾದ 20 ಸಾವಿರನೇ ಕಾರು

ದೇಶದಲ್ಲಿ ಕಂಪನಿಯು ಇತ್ತೀಚೆಗೆ ತನ್ನ 20 ಸಾವಿರನೇ ಕಾರನ್ನು ಚೆನ್ನೈ ಘಟಕದಲ್ಲಿ ಉತ್ಪಾದಿಸಿದೆ. ಕಂಪನಿಯು ದೇಶದಲ್ಲಿ ಹೂಡಿಕೆಯನ್ನು ಕೂಡ ಹೆಚ್ಚಿಸಿದ್ದು, ಹಲವು ವಿಸ್ತರಣಾ ಯೋಜನೆಗಳನ್ನು ಹೊಂದಿದೆ. ಡೀಲರ್ ನೆಟ್ ವರ್ಕ್ ಗಳನ್ನು ಕೂಡ ಕಂಪನಿ ವಿಸ್ತರಿಸಿಕೊಳ್ಳುತ್ತಿದೆ.
ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಎಕ್ಸ್1, ಬಿಎಂಡಬ್ಲ್ಯು 3 ಸೀರಿಸ್ ಮತ್ತು ಬಿಎಂಡಬ್ಲ್ಯು 5 ಸೀರಿಸ್ ಕಾರುಗಳನ್ನು ಚೆನ್ನೈ ಘಟಕದಲ್ಲಿ ಉತ್ಪಾದಿಸುತ್ತಿದೆ. ಈ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕುತ್ತವೆ. ಈ ಘಟಕ ವರ್ಷಕ್ಕೆ 11 ಸಾವಿರ ಯೂನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.
ಮುಂದಿನ ವರ್ಷದ ಅಂತ್ಯಕ್ಕೆ ಬಿಎಂಡಬ್ಲ್ಯು ಇಂಡಿಯಾ ದೇಶದಲ್ಲಿ ಡೀಲರ್ ಜಾಲವನ್ನು ಈಗಿನ 25ರಿಂದ 40ಕ್ಕೆ ವಿಸ್ತರಿಸಲು ಯೋಜಿಸಿದೆ.


Click it and Unblock the Notifications








