ಹೈ ಬೀಮ್ ಹೆಡ್ ಲೈಟ್: ಟ್ರಾಫಿಕ್ ಪೊಲೀಸರಿಂದ ದಂಡ

ವಾಹನ ಚಾಲಕರು ಹೆಡ್ ಲೈಟ್ ಹೈಬೀಮನ್ನು ಬೇಕಾಬಿಟ್ಟಿಯಾಗಿ ಬಳಸುತ್ತಾರೆ. "ವಿರುದ್ಧ ದಿಕ್ಕಿನಲ್ಲಿ ವಾಹನಗಳು ಬರುವಾಗ ಚಾಲಕರು ಬೇಕಾಬಿಟ್ಟಿಯಾಗಿ ಹೆಡ್ ಲೈಟ್ ಬೀಮ್ ಬಳಸುತ್ತಾರೆ. ಇದು ಸುರಕ್ಷಿತ ಚಾಲನೆಗೆ ಪ್ರತಿರೋಧ ಉಂಟು ಮಾಡುತ್ತದೆ" ಎಂದು ದೆಹಲಿ ಟ್ರಾಫಿಕ್ ಪೊಲೀಸ್ ಉಪ ಆಯುಕ್ತ ಸತ್ಯೇಂದ್ರ ಗಾರ್ಗ್ ಹೇಳಿದ್ದಾರೆ.
ಸಂಚಾರಿ ಪೊಲೀಸರು ಹೈಬೀಮ್ ನಿಯಮ ಉಲ್ಲಂಘಿಸಿದವರ ಮೇಲೆ ಪೆನಾಲ್ಟಿ ಹಾಕಿದ್ದಾರೆ. ಇಂತಹ ಸಂದರ್ಭದಲ್ಲಿ ಸಿಕ್ಕಿಬಿದ್ದ ಚಾಲಕರಿಗೆ ಸಂಚಾರಿ ನೀತಿ ನಿಯಮಗಳ ಅರಿವಿಲ್ಲದೇ ಇರುವುದು ತಿಳಿದುಬಂದಿದೆ. ಹೈಬೀಮ್ ಬಳಕೆ ಅಪರಾಧವೆಂಬುದು ಹೆಚ್ಚಿನವರಿಗೆ ಗೊತ್ತೇ ಇರಲಿಲ್ಲವಂತೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ಕೂಡ ಸಂಚಾರಿ ನೀತಿ ನಿಯಮಗಳ ಕುರಿತು ಜನರಿಗೆ ಅರಿವು ನೀಡಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಟ್ರಾಫಿಕ್ ಪೊಲೀಸರ ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಮಾಡುತ್ತಾರೆ. ಅದರಲ್ಲಿಯೂ ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್ ಬುಕ್ ಪುಟ ಇಂಟ್ರೆಸ್ಟಿಂಗ್ ಆಗಿದೆ.


Click it and Unblock the Notifications








