ಹೈಸ್ಪೀಡಿನಲ್ಲಿ ಡೀಸೆಲ್ ಕಾರು ಮಾರಾಟ

ಪ್ರತಿತಿಂಗಳ ರನ್ನಿಂಗ್ ವೆಚ್ಚ ಗಣನೆಯಲ್ಲಿಟ್ಟುಕೊಂಡು ಹೆಚ್ಚು ಗ್ರಾಹಕರು ಇಂಧನ ದಕ್ಷತೆಯ ಕಾರುಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಪೆಟ್ರೋಲ್ ಕಾರುಗಳಿಗೆ ಹೋಲಿಸಿದರೆ ಡೀಸೆಲ್ ಕಾರು ದರ ಒಂದೆರಡು ಲಕ್ಷ ರು. ವ್ಯತ್ಯಾಸವಿರುವುದು ಕೂಡ ಡೀಸೆಲ್ ಕಾರುಗಳಿಗೆ ಆದ್ಯತೆ ನೀಡಲು ಕಾರಣವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ವರ್ಷ ಏಪ್ರಿಲ್ ನಿಂದ ಆಕ್ಟೋಬರ್ ವೇಳೆಗೆ ಪೆಟ್ರೋಲ್ ಕಾರು ಮಾರಾಟ ಶೇಕಡ 14ರಷ್ಟು ಇಳಿಕೆ ಕಂಡಿದೆ. ಆದರೆ ಇದೇ ಸಮಯದಲ್ಲಿ ಡೀಸೆಲ್ ಕಾರು ಮಾರಾಟ ಶೇಕಡ 22ರಷ್ಟು ಏರಿಕೆ ಕಂಡಿದೆ.
ಈಗ ಹೆಚ್ಚಿನ ಪೆಟ್ರೋಲ್ ಕಾರುಗಳು ಕೂಡ ಡೀಸೆಲ್ ಕಾರು ಆವೃತ್ತಿಯಲ್ಲಿ ದೊರಕುತ್ತಿವೆ. ಇದೀಗ ಡೀಸೆಲ್ ಕಾರು ಮಾರಾಟವೂ ಒಟ್ಟಾರೆ ಮಾರಾಟದ ಶೇಕಡ 80ರಷ್ಟನ್ನು ವ್ಯಾಪಿಸಿಕೊಂಡಿದೆ. ಉದಾಹರಣೆಗೆ ಇತ್ತೀಚೆಗೆ ರಸ್ತೆಗಿಳಿದ ಸ್ವಿಫ್ಟ್ ಡೀಸೆಲ್ ಕಾರಿಗೆ ಹೆಚ್ಚು ಜನರು ಬುಕ್ಕಿಂಗ್ ಮಾಡಿದ್ದಾರೆ.
ಡೀಲರುಗಳ ಪ್ರಕಾರ ಸ್ವಿಫ್ಟ್ ಡೀಸೆಲ್ ಕಾರುಗಳಿಗೆ ಶೇಕಡ 80ಕ್ಕಿಂತ ಹೆಚ್ಚು ಜನರು ಬುಕ್ಕಿಂಗ್ ಮಾಡುತ್ತಿದ್ದಾರಂತೆ. ಹ್ಯುಂಡೈ ವೆರ್ನಾ, ಷೆವರ್ಲೆ ಬೀಟ್, ಟೊಯೊಟಾ ಎಟಿಯೋಸ್ ಮತ್ತು ಫಿಗೊ ಡೀಸೆಲ್ ಕಾರುಗಳ ಮಾರಾಟವೇ ಹೆಚ್ಚಾಗುತ್ತಿದೆ. (ಓದಿ: ಡೀಸೆಲ್ ಕಾರೆಂದರೆ ಡೇಂಜರಪ್ಪೋ)


Click it and Unblock the Notifications








