ಸಾವಿರ ಕಾರುಗಳೊಂದಿಗೆ ರಾಸಲೀಲೆ ಆಡಿದ ಭೂಪ

ಕಾರುಗಳೊಂದಿಗೆ ರಾಸಲೀಲೆ

ಅಮೆರಿಕದ ವಾಷಿಂಗ್ಟನ್ ನಲ್ಲಿರುವ ಎಡ್ವರ್ಡ್ ಸ್ಮಿತ್ ಕಥೆ ಪೂರ್ತಿ ಡಿಫರೆಂಟ್. ಆರೋಗ್ಯ ಸಂಬಂಧಿ ಡಾಕ್ಟರ್ ಭಾಷೆಯಲ್ಲಿ ಹೇಳುವುದಾದರೆ ಅನೈಸರ್ಗಿಕ. ರಾಸಲೀಲೆ ಆಡಲು ಆತನಿಗೆ ಮಹಿಳೆಯರ ಅವಶ್ಯಕತೆಯಿಲ್ಲ. ಕಾರುಗಳೇ ಆತನ ಗೆಳತಿಯರು. ಕಾರೇ ಪಲ್ಲಂಗ, ರಾಸಲೀಲೆಗೆ ಕಾರೇ ಗೆಳತಿ..

ಈಗ ಎಡ್ವರ್ಡ್ ಸ್ಮಿತ್ ವನಿಲಾ ಎಂಬ ಗೆಳತಿಯೊಂದಿಗೆ ಮಧುಚಂದ್ರ ನಡೆಸುತ್ತಿದ್ದಾನೆ. ವನಿಲಾ ಅಂದ್ರೆ ಆತನ ಫೋಕ್ಸ್ ವ್ಯಾಗನ್ ಬೀಟಲ್ ಕಾರಿನ ಹೆಸರು. ಈತ ತನ್ನ ಕಾರ್ "ಸಂಸಾರ"ದ ಗುಟ್ಟುರಟ್ಟು ಮಾಡಿದ್ದು ಇತ್ತೀಚೆಗೆ. ಮೆಕಾಫಿಲಿಯಾ ಎಂಬ ಡಾಕ್ಯುಮೆಂಟರಿಗೆ ನೀಡಿದ ಸಂದರ್ಶನದಲ್ಲಿ ತನ್ನ ಕಾರುಗಳೊಂದಿಗಿನ ರಾಸಲೀಲೆಯನ್ನು ಬಿಚ್ಚಿಟ್ಟಾಗ ಜಗತ್ತೇ ಬೆಚ್ಚಿಬಿದ್ದಿದೆ.

ಮೆಕಾಫಿಲಿಯಾ ಎಂದರೆ ಯಂತ್ರದೊಂದಿಗೆ ಲೈಂಗಿಕ ಆಸಕ್ತಿ. ಅಂದ್ರೆ ಬೈಸಿಕಲ್, ಮೋಟರ್ ವಾಹನ, ಹೆಲಿಕಾಪ್ಟರ್ ಮತ್ತು ವಿಮಾನಗಳೊಂದಿಗೆ ಲೈಂಗಿಕ ಸಂಬಂಧ(?). ಕೆಲವು ದೇಶಗಳಲ್ಲಿ ಈ ಕ್ರಿಯೆ ಅಪರಾಧ.

"ನಾನು ಕಾರುಗಳನ್ನು ಪ್ರೀತಿಸುತ್ತೇನೆ. ನನಗದು ರೊಮಾಂಟಿಕ್ ಅನುಭವ ನೀಡುತ್ತದೆ. ಕಾರುಗಳ ಬಗ್ಗೆ ಕವಿತೆ ಬರೆಯುತ್ತೇನೆ. ಕಾರುಗಳಿಗಾಗಿ ಹಾಡುತ್ತೇನೆ. ಅದರಲ್ಲಿ ಮಾತನಾಡುತ್ತೇನೆ. ಕಾರೇ ನನ್ನ ಸರ್ವಸ್ವ. ನನಗೆ ಬೇರೆ ಮಹಿಳೆಯರು ಬೇಕಿಲ್ಲ" ಎಂದು ಟೆಲಿಗ್ರಾಪ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾನೆ.

"ನನಗಿದು ರೋಗವಲ್ಲ. ನಾನು ಯಾರಿಗೂ ನೋವು ಉಂಟು ಮಾಡಲು ಇಷ್ಟಪಡುವುದಿಲ್ಲ. ಕಾರು ಕೇವಲ ನನ್ನ ಪ್ರೀತಿಯ ಆಯ್ಕೆ ಅಷ್ಟೇ. ಕಾರಿನೊಂದಿಗಿನ "ಪ್ರೀತಿ" ಸುಮಧುರ ಅನುಭವ" ಎನ್ನುತ್ತಾನೆ. ಸುಮಾರು 12 ವರ್ಷದ ಹಿಂದೆ ಮಹಿಳೆಯೊಬ್ಬಳೊಂದಿಗೆ ಮಲಗಿದ್ದು ಬಿಟ್ಟರೆ ಹೆಂಗಸರೊಂದಿಗೆ ಸಂಪರ್ಕ ನಡೆಸಿದ್ದು ಅಪರೂಪ. ಯುವಕನಾಗಿದ್ದಾಗ ಕೆಲವು ಸಲ ಯುವತಿಯರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನಂತೆ.

57ರ ಪ್ರಾಯದ ಸ್ಮಿತ್ ಕಾರಿನೊಂದಿಗೆ ರಾಸಲೀಲೆ ಆರಂಭಿಸಿದ್ದು ತನ್ನ 15ನೇ ವಯಸ್ಸಿನಲ್ಲಿ. ಆತನಿಗೆ ಮಹಿಳೆ ಅಥವಾ ಪುರುಷರ ಬಗ್ಗೆ ಯಾವುದೇ ಭಾವನೆ, ಕಾಮ ಮೂಡುತ್ತಿಲ್ಲವಂತೆ. 1980ರಲ್ಲಿ ಹೆಲಿಕಾಫ್ಟರ್ ನೊಂದಿಗೆ ರಾಸಲೀಲೆ ನಡೆಸಿದ್ದು ಆತನಿಗೆ ಎಂದಿಗೂ ಮರೆಯಲಾಗದ ಅನುಭವವಂತೆ. ಕಾರುಗಳಿಗೆ ಜೀವವಿದ್ದರೆ ಕಾರುಗಳು ನಾಚಿಕೊಳ್ಳುತ್ತಿದ್ದವೇನೋ...

ಬೀಟಲ್ ಮಾತ್ರವಲ್ಲದೇ ತನ್ನಲ್ಲಿರುವ ಇತರ ಕಾರುಗಳತ್ತಲೂ "ಪ್ರೀತಿ" ತೋರುತ್ತಾನೆ. ಆತನಲ್ಲಿ 1973ರ ಒಪಾಲ್ ಜಿಟಿ ಕಾರಿದೆ. ಅದನ್ನು ಆತ ಕರೆಯುವುದು ಸಿನ್ನಮೊನ್ ಅಂತ. ಜಿಂಜರ್ ಹೆಸರಿನ ಫೋರ್ಡ್ ರೇಂಜರ್ ಸ್ಪಾಷ್ ಕಾರು ಇದೆ. ಎಲ್ಲವೂ ಆತನ ಸಂಗಾತಿಗಳೇ. ಇಂತಹ ಬಂಧ ಬೆಳೆದದ್ದು ಹೇಗೆ ಎನ್ನುವ ಪ್ರಶ್ನೆಗೆ "ನಾನು ಚಿಕ್ಕದಾಗಿರುವಾಗಲೇ ಈ ಅಭ್ಯಾಸ ಬೆಳೆಯಿತು" ಎನ್ನುತ್ತಾನೆ.

ಒಂದು ಸಾವಿರ ದಾಖಲೆ ವೀರ ಈತ. ಈತನಿಗೆ "ಪ್ರೀತಿ" ಮಾಡಲು ತನ್ನದೇ ಕಾರು ಬೇಕೆಂದಿಲ್ಲ. ಅಪರಿಚಿತರ ಅಥವಾ ಶೋರೂಂಗಳಲ್ಲಿರುವ ಕಾರ್ ಬ್ಯೂಟಿಗಳನ್ನು ಬಳಸಿಕೊಳ್ಳುತ್ತಾನಂತೆ. ಆದರೆ ಕಾರನ್ನು ಯಾವ ರೀತಿ ಬಳಸಿಕೊಳ್ತಾನೆ ಅನ್ನೋದನ್ನು ಆತ ಬಾಯಿಬಿಟ್ಟಿಲ್ಲ. ಹೀಗಾಗಿ ಹೇಗೆ ಬೇಕಾದರೂ ಊಹಿಸಿಕೊಳ್ಳಬಹುದು.

More from DriveSpark

Article Published On: Monday, May 23, 2011, 14:47 [IST]
English summary
A man has claimed that he has had sex with 1,000 cars. Edward Smith is living with his current "girlfriend" - a white Volkswagen Beetle named Vanilla.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+