ಕಾರು ದರ ಗಗನಕ್ಕೆ ಜಿಗಿಯಲು ಕ್ಷಣಗಣನೆ

Falling Value of Rupee Auto Prices Shoot Up Soon
ದೇಶದ ವಾಹನ ಉದ್ಯಮ ಚಿಂತೆ ಮಾಡಲು ಇನ್ನೊಂದು ಕಾರಣ ಸಿಕ್ಕಿದೆ. ರೂಪಾಯಿ ಮೌಲ್ಯ ಕಡಿಮೆಯಾಗುತ್ತಿರುವುದು ಕಂಪನಿಗಳ ಸದ್ಯದ ಚಿಂತೆಗೆ ಕಾರಣ. ಇದರಿಂದಾಗಿ ಕಾರು ಕಂಪನಿಗಳು ಕಾರುಗಳ ದರವನ್ನು ಹೆಚ್ಚಳ ಮಾಡುವ ಒತ್ತಡಕ್ಕೆ ಸಿಲುಕಿವೆ.

ರೂಪಾಯಿ ಮೌಲ್ಯ ಕುಸಿತಕ್ಕೂ ಕಾರು ದರಕ್ಕೂ ಹೇಗೆ ಸಂಬಂಧ ಅಂತ ಕೇಳಬಹುದು. ರೂಪಾಯಿ ಮೌಲ್ಯ ತಗ್ಗಿರುವುದರಿಂದ ಕಾರು ಕಂಪನಿಗಳಿಗೆ ಬಿಡಿಭಾಗಗಳು ಹೆಚ್ಚು ದುಬಾರಿಯಾಗುತ್ತಿವೆ. ಹೆಚ್ಚಿನ ಕಾರು ಕಂಪನಿಗಳು ಬಿಡಿಭಾಗಗಳ ಆಮದನ್ನೇ ಅವಲಂಬಿಸಿವೆ.

ಇದರಿಂದಾಗಿ ಜನರಲ್ ಮೋಟರ್ಸ್ ಮತ್ತು ಟೊಯೊಟಾ ಕಿರ್ಲೊಸ್ಕರ್ ಮೋಟರ್ ಶೀಘ್ರದಲ್ಲಿ ಕಾರು ದರ ಹೆಚ್ಚಿಸಲು ನಿರ್ಧರಿಸಿವೆ.

"ನಾವು ಹೆಚ್ಚಿನ ವಾಹನ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ರೂಪಾಯಿ ಅಪಮೌಲ್ಯಗೊಂಡಿರುವುದು ನಮಗೆ ತುಂಬಾ ಹಿನ್ನಡೆ ಉಂಟು ಮಾಡಿದೆ. ಈ ಹಿನ್ನಲೆಯಲ್ಲಿ ಜನವರಿ ತಿಂಗಳಲ್ಲಿ ಕಾರು ದರಗಳನ್ನು ಹೆಚ್ಚಿಸುವ ಕುರಿತು ಆಲೋಚಿಸುತ್ತಿದ್ದೇವೆ" ಎಂದು ಜನರಲ್ ಮೋಟರ್ಸ್ ಉಪಾಧ್ಯಕ್ಷರಾದ ಪಿ ಬಾಲೆಂದ್ರನ್ ಹೇಳಿದ್ದಾರೆ.

"ರೂಪಾಯಿ ಮೌಲ್ಯ ಕುಸಿದಿರುವುದರಿಂದ ನಾವು ಮುಂದಿನ ವರ್ಷದ ಆರಂಭದಲ್ಲಿ ಕಾರು ದರಗಳನ್ನು ಪರಿಷ್ಕರಿಸಲಿದ್ದೇವೆ" ಎಂದು ಟೊಯೊಟಾ ಕಿರ್ಲೊಸ್ಕರ್ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಹೇಳಿದ್ದಾರೆ.

ಕಳೆದ ಆಕ್ಟೋಬರ್ ತಿಂಗಳಲ್ಲಿ ಟೊಯೊಟಾ ಕಾರು ದರಗಳನ್ನು ಶೇಕಡ 1ರಿಂದ ಶೇಕಡ 1.5ರಷ್ಟು ಹೆಚ್ಚಿಸಿತ್ತು. ಟೊಯೊಟಾ ಇನ್ನೋವಾ ಮತ್ತು ಫಾರ್ಚ್ಯುನರ್ ಕಾರುಗಳಿಗೆ ಶೇಕಡ 50ರಷ್ಟು ಬಿಡಿಭಾಗಗಳನ್ನು ಆಮದುಮಾಡಿಕೊಳ್ಳಲಾಗುತ್ತಿದೆ.

ಷೆವರ್ಲೆ ಸ್ಪಾರ್ಕ್, ಯು-ವಿಎ, ಅವಿಯೊ ಮತ್ತು ಆಪ್ಟ್ರಾ ಕಾರುಗಳು ದುಬಾರಿಯಾಗಲಿವೆ. ಯಾಕೆಂದರೆ ಜನರಲ್ ಮೋಟರ್ಸ್ ಈ ಮಾಡೆಲ್ ಗಳಿಗೆ ಎಂಜಿನ್ ಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಆಡಿ ಇಂಡಿಯಾ ಕೂಡ ದರ ಹೆಚ್ಚಿಸುವ ಕುರಿತು ಆಲೋಚಿಸುತ್ತಿದೆ. ಮಾರುತಿ ಸುಜುಕಿ ಈ ಕುರಿತು ಅಧಿಕೃತವಾಗಿ ಇನ್ನೂ ಪ್ರಕಟಿಸಿಲ್ಲ.

More from DriveSpark

Article Published On: Wednesday, November 23, 2011, 15:06 [IST]
English summary
Indian rupee value is contunuously decrease in recent months. This impact on the imported componants for cars. The increased cost of imported componants the car companies faces huge loss of revenue. This situation General motors and Toyota will increase the car prices soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+