ಅರೇ ನೋಡ್ರಿ ಬೈಕಿಗೂ ಏರ್ ಬ್ಯಾಗ್ ಬಂದಿದೆ!!

ಫ್ರೀಸ್ಕೇಲ್ ಸೆಮೆಕಂಡಕ್ಟರ್ ಮತ್ತು ಬಾಷ್ ಗ್ರೂಪ್ ಆಟೋಮೊಟಿವ್ ಎಲೆಕ್ಟ್ರಾನಿಕ್ಸ್ ಡಿವಿಷನ್ ಜಂಟಿಯಾಗಿ ದ್ವಿಚಕ್ರ ವಾಹನ ಸವಾರರ ಏರ್ ಬ್ಯಾಗ್ ಅಭಿವೃದ್ಧಿಪಡಿಸಿದೆ.
ಈ ಏರ್ ಬ್ಯಾಗ್ ಕಾರ್ಯನಿರ್ವಹಿಸುವುದು ಹೇಗೆ? ಬೈಕ್ ಮತ್ತು ಬೈಕ್ ಸವಾರನ ಜಾಕೆಟ್ ನಲ್ಲಿ ಒಟ್ಟು ಮೂರು ಸೆನ್ಸಾರ್ ಇರುತ್ತದೆ. ಬೈಕ್ ಸ್ಲಿಪ್ ಆದಾಗ ಎರಡು ಸೆನ್ಸಾರ್ ಗಳು ಬೈಕ್ ಸವಾರನ ಜಾಕೆಟ್ ನಲ್ಲಿರುವ ಸೆನ್ಸಾರಿಗೆ ಮಾಹಿತಿ ರವಾನಿಸುತ್ತದೆ.
ತಕ್ಷಣ ಸವಾರನ ಜಾಕೇಟ್ ಏರ್ ಬ್ಯಾಗ್ ತೆರೆದುಕೊಳ್ಳುತ್ತದೆ. ಕೇವಲ 01 ಸೆಕೆಂಡಿನಲ್ಲಿ ಮಾಹಿತಿ ಪಡೆದುಕೊಂಡು ಏರ್ ಬ್ಯಾಗ್ ಕಾರ್ಯನಿರ್ವಹಿಸಿ ಸವಾರನನ್ನು ರಕ್ಷಿಸುತ್ತದಂತೆ. ಈ ಏರ್ ಬ್ಯಾಗನ್ನು ಕಂಪನಿ ಇನ್ನೂ ಮಾರಾಟ ಮಾಡಲು ಸುರು ಮಾಡಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications