ಕಾರುಗಳಿಗೆ 5 ಸ್ಟಾರ್ ಮೈಲೇಜ್ ಹಣೆಪಟ್ಟಿ: ಬಿಇಇ

Fuel Consumption Standards for New Cars
ಒಂದು ಸಮೀಕ್ಷೆಯ ಪ್ರಕಾರ ದೇಶದ ವಾಹನಗಳಲ್ಲಿ ಶೇಕಡ 9ರಿಂದ ಶೇಕಡ 16ರಷ್ಟು ವಾಹನಗಳು ಇಂಧನ ದಕ್ಷತೆಯನ್ನು ಹೊಂದಿವೆಯಂತೆ. ಮೈಲೇಜ್ ಪ್ರೀಯ ಭಾರತದಲ್ಲಿ ಒಟ್ಟಾರೆಯಾಗಿ ಇಂಧನ ದಕ್ಷತೆ ಕಾರುಗಳ ಸಂಖ್ಯೆ ಕಡಿಮೆಯೆಂದೆನಿಸುತ್ತದೆ

ಇಂಧನ ದರ ಹೆಚ್ಚಳ ಮತ್ತು ಇತರ ವಾಹನ ವೆಚ್ಚಗಳ ಈ ಸಮಯದಲ್ಲಿ ಕಾರುಗಳಿಗೆ ಮೈಲೇಜ್ ಪ್ರಮುಖ ಮಾನದಂಡವಾಗುವ ನಿರೀಕ್ಷೆಯಿದೆ. ಕಾರುಗಳ ಇಂಧನ ದಕ್ಷತೆ ಕುರಿತಾಗಿ ಬ್ಯೂರೊ ಆಫ್ ಎನರ್ಜಿ ಎಫಿಷಿಯನ್ಸಿ(ಬಿಇಇ) ಒಂದು ಅಭಿಪ್ರಾಯ ವರದಿ ಪ್ರಕಟಿಸಿದೆ.

ದೇಶದಲ್ಲಿ ಮಾರಾಟವಾಗುವ ಸರಾಸರಿ ವಾಹನ ಸಂಖ್ಯೆ ಹೆಚ್ಚಿದೆ. ಹಿಂದಿನ ದಶಕಗಳಿಗೆ ಹೋಲಿಸಿದರೆ ವಾಹನ ಮಾರಾಟ ಮೂರು ಪಟ್ಟು ಹೆಚ್ಚಾಗಿದೆ. ಇದೇ ಮಾರಾಟ ಸ್ಥಿತಿ ಮುಂದುವರೆದರೆ 2020ರ ವೇಳೆಗೆ ಪ್ರತಿವರ್ಷಕ್ಕೆ ವಾಹನಗಳ ಸಂಖ್ಯೆ 55 ಲಕ್ಷ ಯೂನಿಟ್ ಗೆ ತಲುಪಲಿದೆ ಎಂದು ಬಿಇಇ ಎಚ್ಚರಿಸಿದೆ.

ಇದರೊಂದಿಗೆ ವಾರ್ಷಿಕ ಇಂಧನ ಅವಶ್ಯಕತೆ 2.5 ಕೋಟಿ ಟನ್ ಗೆ ತಲುಪಲಿದೆ. ಕಾರುಗಳ ತೂಕ ಹೆಚ್ಚಾಗಿದೆ ಆದರೆ ಮೈಲೇಜ್ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

ಒಟ್ಟಾರೆ ದೇಶದಲ್ಲಿ 330 ಕಾರು ಮಾಡೆಲ್ ಗಳು 5 ಸ್ಟಾರ್ ವಿಭಾಗಕ್ಕೆ ಬರಬೇಕು. ಆದರೆ ಈಗ ಕೇವಲ 32 ಕಾರು ಮಾಡೆಲ್ ಗಳು 32 ಸಂಖ್ಯೆಯಲ್ಲಿವೆ. 52 ಕಾರು ಮಾಡೆಲ್ ಗಳು 4 ಸ್ಟಾರ್ ವಿಭಾಗದಲ್ಲಿವೆ. ಹೆಚ್ಚು ಮೈಲೇಜ್ ನೀಡುವ ಕಾರುಗಳನ್ನು 5 ಸ್ಟಾರ್ ವಿಭಾಗಕ್ಕೆ ಸೇರಿಸಲಾಗುತ್ತದೆ.

100 ಕಿ.ಮೀ. ಪ್ರಯಾಣಕ್ಕೆ 7 ಲೀಟರ್ ಅನುಭೋಗ ಮಾಡುವ ಕಾರುಗಳಿಗೆ 5 ಸ್ಟಾರ್ ನೀಡಲಾಗುತ್ತದೆ. 100 ಕಿ.ಮೀ.ಗೆ 7ರಿಂದ 9 ಲೀಟರ್ ಇಂಧನ ಬಳಸುವ ಕಾರುಗಳಿಗೆ 4 ಸ್ಟಾರ್ ಮತ್ತು 9ರಿಂದ 11 ಲೀಟರ್ ಬಳಸುವ ಕಾರುಗಳನ್ನು 3 ಸ್ಟಾರ್ ವಿಭಾಗಕ್ಕೆ ಸೇರಿಸಲಾಗುತ್ತದೆ. 100 ಕಿ.ಮೀ. ಪ್ರಯಾಣಕ್ಕೆ 12 ಲೀಟರ್ ಅಥವಾ ಅದಕ್ಕಿಂತ ಹೆಚ್ಚು ಇಂಧನ ಬಳಸುವ ಕಾರುಗಳಿಗೆ 1 ಸ್ಟಾರ್ ನೀಡಲಾಗುತ್ತದೆ.

ಆದರೆ ಸದ್ಯ ದೇಶದಲ್ಲಿರುವ ಕಾರುಗಳಲ್ಲಿ 72 ಕಾರು ಮಾಡೆಲ್ ಗಳು ಒನ್ ಸ್ಟಾರ್ ವಿಭಾಗಕ್ಕೆ ಸೇರಿವೆ. ಉಳಿದಂತೆ 69 ಕಾರುಗಳು 2 ಸ್ಟಾರ್ ಮತ್ತು 105 ಕಾರು ಮಾಡೆಲ್ ಗಳು 3 ಸ್ಟಾರ್ ವಿಭಾಗಕ್ಕೆ ಸೇರಿವೆ ಎಂದು ಬಿಇಇ ವರದಿ ಹೇಳಿದೆ. ಈಗ 4 ಸ್ಟಾರ್ ಕಾರುಗಳ ಮಾರಾಟ ಹೆಚ್ಚಿದೆ.

ಪರಿಸರಕ್ಕೆ ಪ್ರಮುಖ ಆದ್ಯತೆ ನೀಡಲು ಮತ್ತು ಮಾಲಿನ್ಯ ನಿಯಂತ್ರಣಕ್ಕಾಗಿ ಮಧ್ಯಮ ಮತ್ತು ಲಾಗ್ ಟರ್ಮ್ ಇಂಧನ ಅನುಭೋಗ ಗುಣಮಟ್ಟ ಮಾನದಂಡ ಪರಿಚಯಿಸಲು ಬಿಇಇ ಯೋಜಿಸಿದೆ. ಈ ಮಾನದಂಡವು ಹೊಸ ಕಾರು ಮಾಡೆಲ್ ಗಳಿಗೆ ಅನ್ವಯಿಸಲಿದ್ದು ಆ ಕಾರಿನ ಮೈಲೇಜ್ ಕುರಿತು ಕಾರುಗಳಿಗೆ ಬಿಇಇ ಲೇಬಲ್ ಅಂಟಿಸಲಿದೆ.

More from DriveSpark

Article Published On: Tuesday, December 6, 2011, 10:20 [IST]
English summary
Bureau of Energy Efficiency (BEE) released a consultation paper about the fuel efficiency of the Indian cars. Save Environment and decrease the pollution level, BEE is planning to introduce medium and long term fuel consumption standards for new cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+