ಟೈರ್ ಕಾರ್ಪೊರೇಷನ್ ಮಾರಾಟಕ್ಕೆ ಸರಕಾರ ನಿರ್ಧಾರ

"ಟೈರ್ ಕಾರ್ಪೊರೇಷನ್ ಮಾರಾಟಕ್ಕಾಗಿ ಸಲಹಾಸಂಸ್ಥೆಯನ್ನು ನೇಮಕಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಡಿಸೆಂಬರ್ ಮಧ್ಯಾವದಿಯಲ್ಲಿ ಮರ್ಚೆಂಟ್ ಬ್ಯಾಂಕರ್ ನೇಮಕಾತಿ ಪ್ರಕ್ರಿಯೆಯನ್ನು ಡಿಒಡಿ ಸಂಪೂರ್ಣಗೊಳಿಸಲಿದೆ" ಎಂದು ಸರಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಟಿಸಿಐಎಲ್ ವಾಹನ ಟೈರ್ ಗಳನ್ನು ಉತ್ಪಾದಿಸುತ್ತಿದೆ. ಇದರ ಸಂಪೂರ್ಣ ಮಾಲಿಕತ್ವವನ್ನ ಸರಕಾರ ಹೊಂದಿದೆ. 2002ನೇ ಇಸವಿಯಿಂದ ಕಂಪನಿಯು ಸೀಟ್, ಬಿರ್ಲಾ ಟೈರ್ ಕಂಪನಿಗಳಲ್ಲಿ ಉತ್ಪಾದನೆ ನಡೆಸುತ್ತಿದೆ. ಕಂಪನಿಯಲ್ಲಿ ಕೆಲಸಗಾರರ ಕೊರತೆಯಿರುವುದೇ ಬೇರೆ ಕಂಪನಿಯಲ್ಲಿ ಉತ್ಪಾದನೆ ನಡೆಸಲು ಕಾರಣ ಎನ್ನಲಾಗಿದೆ.


Click it and Unblock the Notifications








