ಭವಿಷ್ಯದಲ್ಲಿ ಹೋಂಡಾ ಕಾಂಪ್ಯಾಕ್ಟ್ ಡೀಸೆಲ್ ಕಾರು

"ಪೆಟ್ರೋಲ್ ದರ ಏರಿಕೆ ಕಾಣುತ್ತಿರುವುದು ಮತ್ತು ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಿರುವುದರ ಕುರಿತು ಚಿಂತಿಸಿದ್ದೇವೆ. ಭಾರತದಲ್ಲಿ ಸಣ್ಣ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ನಾವು ಕಾಂಪ್ಯಾಕ್ಟ್ ಡೀಸೆಲ್ ಕಾರುಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ" ಎಂದು ಹೋಂಡಾ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಯಶುಶಿಯಾ ಅರೈ ಹೇಳಿದ್ದಾರೆ.
"ದೇಶದ ವಾಹನ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಬ್ರಿಯೊ ಡೀಸೆಲ್ ಕಾರನ್ನು ಇತ್ತೀಚೆಗೆ ಅನಾವರಣ ಮಾಡಿದ್ದೇವೆ. ಇಲ್ಲಿ ಬೃಹತ್ ಕಾರುಗಳಿಗೆ ಬೇಡಿಕೆ ಕಡಿಮೆ. ಸಣ್ಣಕಾರುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಹೋಂಡಾ ಕಂಪನಿಯು ಕಾಂಪ್ಯಾಕ್ಟ್ ಕಾರು ಮಾರುಕಟ್ಟೆಗೆ ಹೆಚ್ಚಿನ ಒತ್ತು ನೀಡಲಿದೆ" ಎಂದರು.


Click it and Unblock the Notifications