ಯಾವ ಕಾರಿಗೆ ಎಷ್ಟು ರೇಟ್? ಇದು ಡಿಸ್ಕೌಂಟ್ ಕಾಲ

Huge Discount By Car Makers
ದೇಶದ ಕಾರು ಕಂಪನಿಗಳ ಮುಖ ಬಿಗುವಿನಿಂದ ಕೂಡಿದೆ. ಯಾಕೆಂದರೆ ಹಬ್ಬದ ಸೀಸನ್ ಸೇರಿದಂತೆ ಈ ವರ್ಷಾಂತ್ಯದಲ್ಲಿ ವಾಹನ ಮಾರಾಟ ನಿರೀಕ್ಷಿತ ಮಟ್ಟದಲ್ಲಿಲ್ಲ. ಇಂಧನ ದರಗಳ ಏರಿಕೆ, ಬಡ್ಡಿದರದಿಂದ ಕಾರು ಮಾರಾಟ ಗಮನಾರ್ಹವಾಗಿ ಇಳಿಕೆ ಕಂಡಿದೆ.

ಇಂತಹ ಸಂದಿಗ್ಧತೆಯಲ್ಲಿ ಮಾರಾಟ ಹೆಚ್ಚಿಸಿಕೊಳ್ಳಲು ಕಾರು ಕಂಪನಿಗಳು ಶತಾಯಗತಾಯ ಪ್ರಯತ್ನಿಸುತ್ತಿವೆ. ತಮ್ಮ ತಮ್ಮ ಕಾರುಗಳತ್ತ ಗ್ರಾಹಕರನ್ನು ಸೆಳೆಯಲು ಹಲವು ಕಾರು ಕಂಪನಿಗಳು ದರ ವಿನಾಯಿತಿ ಮತ್ತು ಆಮೀಷಗಳನ್ನು ಪ್ರಕಟಿಸುತ್ತಿವೆ.

ಫೋರ್ಡ್ ಇಂಡಿಯಾ ಕಂಪನಿಯು ಫಿಯೆಸ್ಟಾ ಕಾರಿನ ದರವನ್ನು ಸುಮಾರು 75 ಸಾವಿರ ರು.ನಷ್ಟು ತಗ್ಗಿಸಿದೆ. ಇದೀಗ ಫೋರ್ಡ್ ಫಿಯೆಸ್ಟಾ ಪೆಟ್ರೋಲ್ ಆವೃತ್ತಿ ದರ ಸುಮಾರು 8.45 ಲಕ್ಷ ರು.ಗೆ ತಲುಪಿದೆ.

ದೇಶದ ಬೃಹತ್ ಕಾರು ಕಂಪನಿ ಮಾರುತಿ ಸುಜುಕಿ ಕಾರುಗಳ ದರ ಕೂಡ ಕಡಿಮೆಯಾಗಿವೆ. ಕಂಪನಿಯು ವಿವಿಧ ಬ್ರಾಂಡ್ ಕಾರುಗಳಿಗೆ ಶೇಕಡ 20ರಷ್ಟು ವಿನಾಯಿತಿ ಪ್ರಕಟಿಸಿದೆ. ನಿಖರ ದರ ತಿಳಿಯಲು ಹತ್ತಿರದ ಮಾರುತಿ ಶೋರೂಂಗೆ ಒಮ್ಮೆ ಭೇಟಿ ನೀಡಬಹುದು.

ಇಷ್ಟೇ ಅಲ್ಲದೇ ಸ್ಕೋಡಾ, ಹ್ಯುಂಡೈ, ಷೆವರ್ಲೆ ಮತ್ತು ಫಿಯೆಟ್ ಕಂಪನಿಗಳು ಉಚಿತ ವಿಮೆ ಮತ್ತು ಕಡಿಮೆ ಬಡ್ಡಿದರದಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿವೆ. ಟಾಟಾ ಮಾಂಝ್ ದರ ಸುಮಾರು 30 ಸಾವಿರ ರು.ನಿಂದ 34 ಸಾವಿರ ರು.ನಷ್ಟು ಕಡಿಮೆಯಾಗಿದೆ. ನಿಸ್ಸಾನ್ ಸನ್ನಿ ದರ ಕೂಡ ಕಡಿಮೆಯಾಗಿದೆ.

More from DriveSpark

Article Published On: Saturday, November 26, 2011, 16:32 [IST]
English summary
2011 End brings huge discounts by various carmakers in India. Ford India announced availing discount of Rs. 75,000 for Ford Fiesta petrol top verient. Maruti Suzuki also offering discount to many cars. Hyundai India, Skoda, Chevrolet and Fiat also giving loans at the lower rate of interest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+