ಸೊನಾಟಾ ಮತ್ತು ಸಾಂತಾ ಫೆ ದೇಶದಲ್ಲಿ ನಿರ್ಮಾಣ

ಹ್ಯುಂಡೈ ಕಂಪನಿಯ ಸೊನಾಟಾ ಮತ್ತು ಸಾಂತಾ ಫೆ ಜನಪ್ರಿಯ ಕಾರುಗಳು. ಆದರೆ ಇವುಗಳನ್ನು ಕಂಪನಿ ದೇಶಕ್ಕೆ ಆಮದುಮಾಡಿಕೊಳ್ಳುತ್ತಿದೆ. ಆಮದು ಸುಂಕ ಇತ್ಯಾದಿ ಕಾರಣಗಳಿಂದ ಈ ಮಾಡೆಲ್ ಗಳ ದರವೂ ಹೆಚ್ಚು. ಹೀಗಾಗಿ ಈ ಕಾರುಗಳು ಅತ್ಯುತ್ತಮವಾಗಿದ್ದರೂ ಖರೀದಿಗೆ ಹೆಚ್ಚು ಜನರು ಮನಸ್ಸು ಮಾಡುತ್ತಿಲ್ಲ.

ಇದರ ದರ ತಗ್ಗಿಸಲು ಕಂಪನಿಗಿರುವ ಮಾರ್ಗವೆಂದರೆ ಸ್ಥಳೀಯ ಉತ್ಪಾದನೆ. ಸಾಂತಾ ಫೆ ಮತ್ತು ಸೊನಾಟ ಎಸ್ ಯುವಿಗಳನ್ನು ದೇಶದಲ್ಲಿ ನಿರ್ಮಿಸುವ ಕುರಿತು ಯೋಚಿಸುತ್ತಿರುವುದಾಗಿ ಹ್ಯುಂಡೈ ಮೋಟರ್ಸ್ ಇಂಡಿಯಾ ಹೇಳಿದೆ. ದೇಶದಲ್ಲಿ ನಿರ್ಮಾಣವಾದರೆ ಸೊನಾಟ, ಸಾಂತಾ ಫೆ ದರ ಕಡಿಮೆಯಾಗಲಿದೆ.

ಹ್ಯುಂಡೈ ಸೊನಾಟ ದರ ಸುಮಾರು 17.73 ಲಕ್ಷ ರು. ಇದೆ. ಆದರೆ ಈ ಕಾರನ್ನು ದೇಶದಲ್ಲಿ ಸಿಕೆಡಿ ಯುನಿಟ್ ಮೂಲಕ ಉತ್ಪಾದಿಸಿದರೆ ದರ ಕಡಿಮೆಯಾಗುವ ನಿರೀಕ್ಷೆಯಿದೆ. ಕಡಿಮೆ ಆಮದು ಸುಂಕ, ಸಾಗಾಣೆ ವೆಚ್ಚವೂ ತಗ್ಗುವುದರಿಂದ ಸೊನಾಟ ದರ ಕಡಿಮೆಯಾಗಲಿದೆ.

ಹ್ಯುಂಡೈ ಸಾಂತಾ ಫೆ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಕೂಡ ಜನಪ್ರಿಯ ಕಾರು. ಇದರ ಬೃಹತ್ ಗಾತ್ರ, ಹೆಚ್ಚು ಸ್ಥಳಾವಕಾಶ, ಶಕ್ತಿ ಮತ್ತು ಕಾರ್ಯಕ್ಷಮತೆ ಹೆಚ್ಚಿನ ಜನರಿಗೆ ಇಷ್ಟವಾಗುವಂತ್ತಿದೆ. ಆದರೆ ಇದು ದುಬಾರಿಯಾದ ಕಾರಣ ಹೆಚ್ಚು ಜನರು ಆಡಿ ಕ್ಯೂ7 ಮತ್ತು ಬಿಎಂಡಬ್ಲ್ಯು ಎಕ್ಸ್5 ಕಾರುಗಳನ್ನು ಖರೀದಿಸುತ್ತಿದ್ದಾರೆ.

ಕಂಪನಿ ಕಳೆದ ಆಗಸ್ಟ್ ತಿಂಗಳಿನಿಂದ ಕೆಲವು ಸಾಂತಾ ಫೆ ಕಾರುಗಳನ್ನು ದೇಶದಲ್ಲಿ ಉತ್ಪಾದಿಸಲು ಪ್ರಯತ್ನಿಸಿದೆ. ಆದರೆ ಇದು ಪೂರ್ಣ ಪ್ರಮಾಣದಲ್ಲಿ ಆರಂಭವಾಗುವುದು ಮುಂದಿನ ವರ್ಷದಲ್ಲಿಯಂತೆ.

More from DriveSpark

Article Published On: Friday, December 16, 2011, 10:49 [IST]
English summary
Hyundai Motors India is said to be planning to build the only models it is currently importing as CBUs so that their selling price can be reduced. The two models are the Sonata premium sedan and the Santa Fe premium SUV. These two models are Hyundai’s highest priced models and the reason behind this is the high import duties imposed on imported cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+