ಇಯಾನಿಗೆ ಟಾಪ್ ಗೇರ್ ಹಾಕಲು ಹ್ಯುಂಡೈ ಪ್ರಯತ್ನ

Hyundai India trying to push Eon sales
ದೇಶದ ಎರಡನೇ ಬೃಹತ್ ಕಾರು ತಯಾರಿಕಾ ಕಂಪನಿ ಹ್ಯುಂಡೈ ಮೋಟರ್ ಇಂಡಿಯಾ ಲಿಮಿಟೆಡ್ ಇತ್ತೀಚೆಗೆ ಸಣ್ಣ ಕಾರು ಇಯಾನ್ ಪರಿಚಯಿಸಿತ್ತು. ಈ ಕಾರಿನ ಕುರಿತು ಕಂಪನಿಯ ನಿರೀಕ್ಷೆ ಆಕಾಶದಷ್ಟಿತ್ತು. ಕಾರು ವಿಮರ್ಶೆಗಳಲ್ಲೂ ಇದರ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿತ್ತು.

ಆದರೆ ಗ್ರಾಹಕರಿಂದ ಇಯಾನ್ ಕಾರಿಗೆ ಬೇಡಿಕೆ ಆಶಾದಾಯಕವಾಗಿಯೇನು ಇಲ್ಲ. ಹೀಗಾಗಿ ಕಂಪನಿಯು ಈಗ ಇಯಾನ್ ಮಾರಾಟ ಹೆಚ್ಚಿಸಲು ಶತಾಯಗತಾಯ ಯತ್ನಿಸುತ್ತಿದೆ. ಬಿಸಿನೆಸ್ ಸ್ಟಾಂಡರ್ಡ್ ವರದಿಯ ಪ್ರಕಾರ ಇಯಾನ್ ಕಾರಿನ ಕುರಿತು ಗ್ರಾಹಕರ ಆಸಕ್ತಿ ಕಂಪನಿಯ ನಿರೀಕ್ಷೆಗಿಂತ ಶೇಕಡ 10ರಷ್ಟು ಕಡಿಮೆಯಿದೆಯಂತೆ.

ಫ್ಲೂಡಿಕ್ ವೆರ್ನಾ ಗೆಲುವಿನ ನಂತರ ಕಂಪನಿಯು ಇಯಾನ್ ಕಾರನ್ನು ಕಳೆದ ತಿಂಗಳು ಪರಿಚಯಿಸಿತ್ತು. ಅತ್ಯಧಿಕ ಬಡ್ಡಿದರ, ಹೆಚ್ಚಾದ ಇಂಧನ ದರ ಇತ್ಯಾದಿಗಳು ಕಾರು ಖರೀದಿದಾರರ ಭಾವನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದಾಗಿ ಹ್ಯುಂಡೈ ಮಾರಾಟ ಇಳಿಕೆ ಕಂಡಿದೆ. ಆದರೂ ಈಗಾಗಲೇ 9 ಸಾವಿರ ಇಯಾನ್ ಕಾರುಗಳ ಬುಕ್ಕಿಂಗ್ ಆಗಿದೆ.

ಅಕ್ಟೋಬರ್ 13ರಂದು ಹ್ಯುಂಡೈ ರಸ್ತೆಗಿಳಿದ ನಂತರ ಸುಮಾರು 96 ಸಾವಿರ ಗ್ರಾಹಕರು ಇಯಾನ್ ಕುರಿತು ಡೀಲರುಗಳಲ್ಲಿ ವಿಚಾರಿಸಿದ್ದಾರೆ. ಆದರೆ ಮಾರುಕಟ್ಟೆಯಲ್ಲಿನ ಸಿತ್ಯಾಂತರಗಳಿಂದ ಹೆಚ್ಚು ಜನರು ಕಾರು ಖರೀದಿ ನಿರ್ಧಾರದಿಂದ ವಿಮುಖರಾಗಿದ್ದಾರೆ.

ಮೊದಲ ಸಾರಿ ಕಾರು ಖರೀದಿಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಇಯಾನ್ ಕಾರನ್ನು ಹ್ಯುಂಡೈ ಪರಿಚಯಿಸಿತ್ತು. ಹ್ಯುಂಡೈ ಇಯಾನ್. ಪುಟ್ಟ ಹ್ಯಾಚ್ ಬ್ಯಾಕ್ ಕಾರು. ಮಾರುತಿ 800 ಇಷ್ಟಪಟ್ಟವರಿಗೆ ಇದು ಡಬಲ್ ಇಷ್ಟವಾದೀತು. ಇಯಾನ್ 0.8 ಲೀಟರಿನ 814 ಸಿಸಿ, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 55 ಅಶ್ವಶಕ್ತಿ ಮತ್ತು 76.5 ಟಾರ್ಕ್ ಪವರ್ ನೀಡುತ್ತದೆ.

ಟಾಪ್ ಎಂಡ್ ಆವೃತ್ತಿಯಲ್ಲಿ ಒಂದಿಷ್ಟು ಆಕರ್ಷಕ ಫೀಚರುಗಳನ್ನು ಪಡೆಯಬಹುದು. ಇದರಲ್ಲಿ 17 ಸೆಕೆಂಡಿಗೆ 100 ಕಿ.ಮೀ. ವೇಗ ಪಡೆಯಬಹುದಾಗಿದೆ. ಈ ಕಾರಿನ ಗರಿಷ್ಠ ವೇಗ ಪ್ರತಿಗಂಟೆಗೆ 130 ಕಿ.ಮೀ. ಮೊದಲ ಕಾರು ಖರೀದಿಸುವರಿಗೆ ಬೇಸ್ ಇಯಾನ್ ಆವೃತ್ತಿ ಉತ್ತಮ.

ಹ್ಯುಂಡೈ ಇಯಾನ್ ಇಂಧನ ದಕ್ಷತೆಯ ವಿಷಯದಲ್ಲೂ ಇಷ್ಟವಾಗುತ್ತದೆ. ಈ ಕಾರು ಪ್ರತಿಲೀಟರ್ ಪೆಟ್ರೋಲ್ ಗೆ 21.1 ಕಿ.ಮೀ. ಮೈಲೇಜ್ ನೀಡುತ್ತದೆ. ನೂತನ ಇಯಾನ್ ಬೆಂಗಳೂರು ಎಕ್ಸ್ ಶೋರೂಂ ದರ 2,73,599 ರು.ನಿಂದ 3,76,827 ರುಪಾಯಿವರೆಗಿದೆ.

More from DriveSpark

Article Published On: Saturday, November 19, 2011, 10:17 [IST]
English summary
Hyundai Motor India Ltd is trying to push into next gear in terms of sales with its new small entry level car Eon. Now customer response to eon has been a little slow compared to the Hyundai expectations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+