ಹ್ಯುಂಡೈ ಹದಿನೈದು ಕಾರುಗಳಿಗೆ ಸುಸ್ವಾಗತ

ಕಳೆದ ವರ್ಷ ಭಾರತವು ಜಗತ್ತಿನ ವೇಗವಾಗಿ ಬೆಳೆಯುತ್ತಿರುವ ವಾಹನ ಮಾರುಕಟ್ಟೆಯಾಗಿ ಹೊರಹೊಮ್ಮಿತ್ತು. ಹ್ಯುಂಡೈ ಕಂಪನಿಯು ದೇಶದ ವಾಹನ ಮಾರುಕಟ್ಟೆಯ ಮೇಲೆ ಸಾಕಷ್ಟು ಭರವಸೆ ವ್ಯಕ್ತಪಡಿಸಿದೆ. ಕಂಪನಿಯು ಐದು ವರ್ಷಗಳಲ್ಲಿ ಹೊಸ ಕಾರುಗಳನ್ನು ಮತ್ತು ಪರಿಷ್ಕೃತ ಆವೃತ್ತಿಗಳನ್ನು ಹೊರತರಲಿದೆ.
ಕಂಪನಿಯು ಇತ್ತೀಚೆಗೆ ಪರಿಚಯಿಸಿದ ಇಯಾನ್ ಹೆಚ್ಚು ಜನರ ಮೆಚ್ಚುಗೆ ಪಡೆದಿದೆ. ಯಾನ್ ಬೆಂಗಳೂರು ಎಕ್ಸ್ ಶೋರೂಂ ದರ 2,73,599 ರು.ನಿಂದ 3,76,827 ರುಪಾಯಿವರೆಗಿದೆ. ಇಯಾನ್ ಕಾರು 814 ಸಿಸಿ ಪೆಟ್ರೊಲ್ ಎಂಜಿನ್ ಹೊಂದಿದೆ. ಇದು 5,500 ಆರ್ ಪಿಎಂಗೆ 56 ಪಿಎಸ್ ಪವರ್ ಮತ್ತು 4 ಸಾವಿರ ಆರ್ ಪಿಎಂಗೆ 76.5 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ. ಇದು 5 ಸ್ಪೀಡ್ ಮ್ಯಾನುಯಲ್ ಗೇರ್ ಹೊಂದಿದೆ.
ಮುಂದಿನ ಐದು ವರ್ಷಗಳಲ್ಲಿ ಕಂಪನಿಯು ಐ35 ಮತ್ತು ಐಎಕ್ಸ್35 ಕಾರುಗಳನ್ನು ಹೊರತರುವ ನಿರೀಕ್ಷೆಯಿದೆ. ಈ ಕಾರುಗಳು ಈಗಾಗಲೇ ಐರೋಪ್ಯ ಮಾರುಕಟ್ಟೆಗಳಲ್ಲಿವೆ. ಉಳಿದಂತೆ ಐ10 ಮತ್ತು ಐ20 ಕಾರುಗಳ ಪರಿಷ್ಕೃತ ಆವೃತ್ತಿ ಕೂಡ ಆಗಮಿಸುವ ನಿರೀಕ್ಷೆಯಿದೆ.


Click it and Unblock the Notifications








