ಭಾರತದ ಮಹಾರಾಜರ ಕಾರು ಲಂಡನ್ ನಲ್ಲಿ ಹರಾಜು

ಭಾರತದ ಮಹಾರಾಜರೊಬ್ಬರು ಬಳಸಿದ್ದ ರೋಲ್ಸ್ ರಾಯ್ಸ್ ಕಾರೊಂದನ್ನು ಲಂಡನ್ ನಲ್ಲಿ ಹರಾಜಿಗಿಡಲಾಗಿದೆ. ಗುಲ್ ವಿಂಗ್ ಬಾಗಿಲಿನ ರೋಲ್ಸ್ ರಾಯ್ಸ್ ಕಾರನ್ನು ಸುಮಾರು ಎಂಟುವರೆ ಲಕ್ಷ ಪೌಂಡಿಗೆ ನೀಡುವುದಾಗಿ ಲಂಡನ್ ನ ಸ್ಪಾರ್ಕ್ಸ್ ಕಾರ್ಸ್ ಡಾಟ್ ಕಾಂ ಹೇಳಿಕೊಂಡಿದೆ. ಆದರೆ ದೇಶದ ಮಹಾರಾಜರ ಹೆಸರನ್ನು ವರದಿಯಲ್ಲಿ ತಿಳಿಸಲಾಗಿಲ್ಲ.

ನಂಬರ್ ಪ್ಲೇಟಿನಲ್ಲಿ "ಸಿಕ್ಸಿ" ಎಂದು ಬರೆಯಲಾಗಿರುವ "ದಿ ರೂಬ್" ಸೂಪರ್ ಕಾರನ್ನು 2005ರಲ್ಲಿ ರೋಲ್ಸ್ ರಾಯ್ಸ್ ಮರುವಿನ್ಯಾಸ ಮಾಡಿತ್ತು. ನಾಲ್ಕು ಸೀಟ್ ನ ಪಾಂಟೊಮ್ ಡಿಸಿ ಕಾನ್ಸೆಪ್ಟ್ ಕಾರಿನ ಮಾಲೀಕರು ಭಾರತದ ಮಹಾರಾಜರೊಬ್ಬರು ಎಂದು ಡೈಲಿ ಮೈಲ್ ವರದಿ ಮಾಡಿದೆ. ಈ ಕಾರು ಪ್ರತಿಗಂಟೆಗೆ ಗರಿಷ್ಠ 200 ಕಿ.ಮೀ. ವೇಗ ಹೊಂದಿದೆ.

ಕಾರಿನ ಕೆಂಪು ಬಣ್ಣದ ಲೀದರ್ ಇಂಟಿರಿಯರ್ ಆಕರ್ಷಕವಾಗಿದ್ದು, ಸುಂದರವಾದ ಡ್ಯಾಷ್ ಬೋರ್ಡ್, ಡಿವಿಡಿ ಸ್ಕ್ರೀನ್ ಮತ್ತು 22 ಇಂಚಿನ ಅಲಾಯ್ ವೀಲನ್ನು ವಿಶೇಷವಾಗಿ ಮಹಾರಾಜರಿಗಾಗಿ ಕಂಪನಿ ರೂಪಿಸಿತ್ತು ಎಂದು ಮೈಲ್ ವರದಿಯಲ್ಲಿ ಉಲ್ಲೇಖಿಸಿದೆ. "ಈ ಕಾರು ಸಾಕಷ್ಟು ವಾಹನ ಪ್ರೇಮಿಗಳನ್ನು ಸೆಳೆದಿದೆ. ಇದಕ್ಕೆ ಸಾಕ್ಷಿಯಾಗಿ ಕಳೆದ ಒಂದು ವಾರದಲ್ಲಿ ತಮ್ಮ ವೆಬ್ ಸೈಟ್ ಈ ಕಾರಿನ ಕುರಿತು 16,800 ಹಿಟ್ಸ್ ಪಡೆದಿದೆ" ಎಂದು ಲಂಡನಿನ ಸ್ಪಾರ್ಕ್ಸ್ ಡಾಟ್ ಕಾಂ ಹೇಳಿದೆ.

More from DriveSpark

Article Published On: Monday, April 18, 2011, 14:13 [IST]
English summary
A Rolls-Royce Car with gull-wing doors owned by an Indian Maharajah has gone on sale for a hopping 850,000 pounds. The four-seater Phantom DC Concept was designed by its wealthy owner, the Daily Mail reported on its website. But this report not mention Maharajahs name.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+