ಮಾರುತಿ ಸುಜುಕಿಯಿಂದ ಡೀಸೆಲ್ ವ್ಯಾಗನಾರ್?

ಇದೀಗ ಮಾರುತಿ ಸುಜುಕಿ ವ್ಯಾಗನಾರಿಗೆ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿರುವುದಾಗಿ ಕೆಲವು ವರದಿಗಳು ಹೇಳಿವೆ. ಕಂಪನಿ ಇಂತಹ ನಿರ್ಧಾರ ತೆಗೆದುಕೊಂಡರೆ ನಿಜಕ್ಕೂ ಬ್ರಿಲಿಯೆಂಟ್ ಐಡಿಯಾ ಆಗಲಿದೆ. ಸದ್ಯ ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯೂ ಇದೆ.
ವರದಿಗಳ ಪ್ರಕಾರ ಡೀಸೆಲ್ ವ್ಯಾಗನಾರ್ ಒಂದು ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದೆಯಂತೆ. ಇದು 970 ಸಿಸಿಯ, ಮೂರು ಸಿಲಿಂಡರಿನ ಎಂಜಿನ್ ಹೊಂದಿರಲಿದೆ ಎಂದು ವರದಿಗಳು ಹೇಳಿವೆ. ಇದು 58 ಪಿಎಸ್ ಮತ್ತು 150 ಎನ್ಎಂ ಟಾರ್ಕ್ ಪವರ್ ನೀಡಲಿದೆ.
ವ್ಯಾಗನಾರ್ ಡೀಸಲ್ ಆವೃತ್ತಿಯು ಅತ್ಯುತ್ತಮ ಮೈಲೇಜ್ ಕೂಡ ನೀಡುವ ನಿರೀಕ್ಷೆಯಿದೆ. ಇದು ಪ್ರತಿಲೀಟರ್ ಗೆ ಸುಮಾರು 25 ಕಿ.ಮೀ. ಮೈಲೇಜ್ ನೀಡುವ ನಿರೀಕ್ಷೆಯಿದೆ. ಹಾಗಾದರೆ ಇದು ದೇಶದ ಅತ್ಯುತ್ತಮ ಮೈಲೇಜ್ ಕಾರಾಗಲಿದೆ.
ಜೊತೆಗೆ ಇದು ದೇಶದ ಅಗ್ಗದ ಡೀಸೆಲ್ ಕಾರು ಕೂಡ ಆಗಲಿದೆ. ಇದೀಗ ವ್ಯಾಗನಾರ್ ಟಾಪ್ ಆವೃತ್ತಿ ಎಕ್ಸ್ ಶೋರೂಂ ದರ 4.20 ಲಕ್ಷ ರು. ಇದೆ. ಡೀಸೆಲ್ ಎಂಜಿನ್ ಅಳವಡಿಸಿದ ನಂತರ 75 ಸಾವಿರ ರು. ಹೆಚ್ಚು ಮಾಡಿದರೂ ಇದರ ದರ 5 ಲಕ್ಷ ರು. ಒಳಗಿರಲಿದೆ. ಎಂಟ್ರಿ ಲೆವೆಲ್ ಡೀಸೆಲ್ ವ್ಯಾಗನಾರ್ ದರ 4 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.


Click it and Unblock the Notifications








