ಮಾರುತಿ ಸುಜುಕಿ ಅಗ್ರಿಮೆಂಟ್ ಅಸಾಂವಿಧಾನಿಕ: ಖರ್ಗೆ

Is Maruti Suzuki's Good Conduct Bond Illegal?
ಸಮಸ್ಯೆಗಳು ಮಾರುತಿಯ ಬೆನ್ನು ಬಿಡುವ ಹಾಗೇ ಕಾಣುತ್ತಿಲ್ಲ. ಇದೀಗ ಮಾರುತಿ ಸುಜುಕಿಗೆ ಇನ್ನೊಂದು ತೊಡಕು ಸುತ್ತಿಕೊಳ್ಳುವ ಸೂಚನೆಗಳು ದಟ್ಟವಾಗಿವೆ.

ಮಾನೆಸರ್ ಘಟಕದಲ್ಲಿ ನೌಕರರ ಮುಷ್ಕರಕ್ಕೆ ಅಂಕುಶ ಹಾಕಲು ಆರಂಭಿಸಿದ ಉತ್ತಮ ನಡತೆ ಬಂಧ ಅಥವಾ ಗುಡ್ ಕಂಡಕ್ಟ್ ಬಾಂಡ್ ಸಾಂವಿಧಾನಿಕವೇ ಎಂಬ ಪ್ರಶ್ನೆಯೆದ್ದಿದೆ. ಭವಿಷ್ಯದಲ್ಲಿ ಯಾವುದೇ ಮುಷ್ಕರದಲ್ಲಿ ಪಾಲ್ಗೊಳ್ಳುವುದಿಲ್ಲವೆಂಬ ಅಗ್ರಿಮೆಂಟಿಗೆ ಸಹಿಹಾಕುವಂತೆ ಕಂಪನಿ ತಿಳಿಸಿತ್ತು.

ಉತ್ತಮ ನಡತೆ ಬಂಧ ಸಹಿ ಹಾಕಿದವರಿಗೆ ಮಾತ್ರ ಮಾನೆಸರ್ ಘಟಕಕ್ಕೆ ಪ್ರವೇಶಿಸುವಂತೆ ಸಿಬ್ಬಂದಿಗಳಿಗೆ ಮಾರುತಿ ಕಂಪನಿ ಸೂಚಿಸಿತ್ತು. ಇದಕ್ಕೆ ಸಹಿ ಹಾಕಲು ಹೆಚ್ಚಿನ ನೌಕರರು ನಿರಾಕರಿಸಿದ್ದರು. ಇದರ ಪರಿಣಾಮವಾಗಿ ನೌಕರರ ಮೂರನೇ ಮುಷ್ಕರ ಆರಂಭವಾಗಿತ್ತು.

ಇದೀಗ ನಡತೆ ಬಂಧದ ಕುರಿತು ಸರಕಾರ ಮತ್ತು ವಿರೋಧ ಪಕ್ಷಗಳು ಹೊಸ ಚರ್ಚೆ ಆರಂಭಿಸಿವೆ. ನೌಕರರಿಂದ ಇಂತಹ ಅಗ್ರಿಮೆಂಟಿಗೆ ಬಲವಂತದಿಂದ ಸಹಿ ಹಾಕಿಸಿದ್ದು ಸರಿನಾ ಎಂದು ವಿರೋಧ ಪಕ್ಷ ಸರಕಾರವನ್ನು ಪ್ರಶ್ನಿಸಿತ್ತು. ಇದಕ್ಕೆ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾರುತ್ತರವನ್ನು ನೀಡಿದ್ದಾರೆ.

"ಕೆಲಸಗಾರರಿಂದ ಉತ್ತಮ ನಡತೆ ಬಂಧಕ್ಕೆ ಸಹಿಹಾಕಿಸಿರುವುದು 1947ರ ಕೈಗಾರಿಕಾ ಕಾಯಿದೆಗೆ ವಿರುದ್ಧವಾಗಿದೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಪಾರ್ಲಿಮೆಂಟಿನಲ್ಲಿ ಈ ವಿಷಯದ ಕುರಿತು ಸಿಪಿಐನ ಗುರುದಾಸ್ ದೇಶ್ ಗುಪ್ತಾ ಮತ್ತು ಬಿಜೆಪಿಯ ಗೋಪಿನಾಥ್ ಮುಂಡೆ ಚರ್ಚೆ ಆರಂಭಿಸಿದ್ದರು.

ಖರ್ಗೆ ಮಾತಿನ ಕುರಿತು ಮಾರುತಿ ಸುಜುಕಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

More from DriveSpark

Article Published On: Tuesday, November 29, 2011, 15:31 [IST]
English summary
Maruti Suzuki appears to have caught itself in yet another controversy after political parties termed its good conduct bond that the carmaker had asked its workers to sign in Manesar as illegal. Now the government and the opposition parties have taken notice of the bond and have said Maruti Suzuki has flouted labour laws by insisting that workers had to sign this bond. Union labour minister Mallikarjun Kharge has said: “Demanding of good conduct bonds from workers as per conditions before allowing them to resume work is an arbitrary act and it also amounts to unfair labour practice as given in the Industrial Disputes Act, 1947.”
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+