ಮಹೀಂದ್ರಾ 'ಜಿನಿಯೊ ಡಬಲ್ ಕ್ಯಾಬ್' ಮಾರುಕಟ್ಟೆಗೆ

ಹವಾನಿಯಂತ್ರಿತ ವ್ಯವಸ್ಥೆ ಸೇರಿದಂತೆ ಹೆಚ್ಚುವರಿ ಸೌಲಭ್ಯವಿರುವ ವಾಹನಕ್ಕೆ ರೂ 5.95 ಲಕ್ಷ ನಿಗದಿಪಡಿಸಲಾಗಿದೆ. 'ಜಿನಿಯೊ' ಪ್ರತಿ ಲೀಟರಿಗೆ 13 ಕಿ.ಮೀ ಇಂಧನ ಕ್ಷಮತೆ ಹೊಂದಿದ್ದು, ಆಗಸ್ಟ್ ಮೊದಲ ವಾರದಲ್ಲಿ ದೇಶದಾದ್ಯಂತ ಲಭ್ಯವಾಗಲಿದೆ ಎಂದು ಕಂಪೆನಿಯ ಮಾರುಕಟ್ಟೆ ಉಪಾಧ್ಯಕ್ಷ ವಿವೇಕ್ ನಾಯರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಪಿಕ್ ಅಪ್' ಸರಣಿಯಲ್ಲಿ ಮಹೀಂದ್ರಾ ಶೇ 73ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ವಾಣಿಜ್ಯ ಮತ್ತು ಗೃಹ ಬಳಕೆ ಎರಡನ್ನೂ ಗಮನದಲ್ಲಿಟ್ಟುಕೊಂಡು, ವಿಶ್ವದರ್ಜೆಯ ಗುಣಮಟ್ಟದೊಂದಿಗೆ ಈ ವಾಹನ ವಿನ್ಯಾಸಗೊಳಿಸಲಾಗಿದೆ ಎಂದು ನಾಯರ್ ಹೇಳಿದರು


Click it and Unblock the Notifications








