ಮಂಗಳೂರಿನಲ್ಲಿ ಮಾರುತಿ ಸುಜುಕಿ ಆಟೋಕ್ರಾಸ್

ಶನಿವಾರ ನಡೆದದ್ದು ಪ್ರಾಕ್ಟಿಸ್ ಸೆಸನ್. ಭಾನುವಾರ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಆಟೋ ಕ್ರಾಸ್ ಸ್ಪರ್ಧೆ ನಡೆದಿದೆ. ಧೂಳು ತುಂಬಿದ ಹಾದಿಯಲ್ಲಿ ಧೂಳೆಬ್ಬಿಸುತ್ತ ಸಾಗುವ ಕಾರು ಬೈಕುಗಳಲ್ಲಿ ಅಂತಿಮವಾಗಿ ಗೆದ್ದವರ ಹೆಸರು ಇಂತಿದೆ.
ಡರ್ಟ್ ಬೈಕ್ ಫಲಿತಾಂಶ: ಚಿಕ್ಕಮಗಳೂರಿನ ಅಭಿಷೇಕ್ 4 ಸ್ಟ್ರೋಕ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮಂಗಳೂರಿನ ಅದ್ನಾನ್ ಅಹಮ್ಮದ್ ಮತ್ತು ಶ್ರುಪ್ತ ಪಡಿವಾಳ್ ಮಂಗಳೂರು ಕ್ರಮವಾಗಿ ದ್ವಿತೀಯಾ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.
2 ಸ್ಟ್ರೋಕ್ ವಿಭಾಗದಲ್ಲಿ ಸುಹೈಲ್ ಅಹ್ಮಾದ್, ಬೆಂಗಳೂರು ಪ್ರಥಮ ಸ್ಥಾನ ಪಡೆದಿದ್ದಾರೆ. ಸ್ಥಳೀಯ ಬೈಕ್ ಆಟೋ ಕ್ರಾಸ್ ವಿಭಾಗದಲ್ಲಿ ನಿಶಾಕ್ ಸಾಲಿಯಾನ್ ಗೋರಿಗುಡ್ಡ, ದಿನೇಶ್ ಗೌಡ ಪುತ್ತೂರು ಮುಂತಾದವರೂ ಸ್ಥಾನ ಪಡೆದಿದ್ದಾರೆ.
ನಾಲ್ಕು ಚಕ್ರ ವಿಭಾಗ: 1600 ಸಿಸಿ ವಿಭಾಗದ ಆಟೋ ಕ್ರಾಸ್ ನಲ್ಲಿ ಚಿಕ್ಕಮಗಳೂರಿನ ಶಫೀಕ್ ಪ್ರಥಮ ಸ್ಥಾನ ಪಡೆದಿದ್ದಾರೆ. 1300 ಸಿಸಿ ವಿಭಾಗದಲ್ಲಿ ಚಿಕ್ಕಮಗಳೂರಿನ ರುದ್ರೇಶ್ ಪಾಟೀಲ್, 800 ಸಿಸಿ ವಿಭಾಗದಲ್ಲಿ ಅಶೋಕ್ ಮೂಡಿಗೆರೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಮಹಿಳಾ ವಿಭಾಗದ ನಾಲ್ಕು ಚಕ್ರದ ಆಟೋ ಕ್ರಾಸ್ ನಲ್ಲಿ ಬೆಂಗಳೂರಿನ ಹರ್ಷಿತಾ ಗೌಡ, ಮೈಸೂರಿನ ವೀಣಾ ಪೊಣ್ಣಪ್ಟ ಮತ್ತು ನಿವೇದಿತಾ ಹರ್ಷಿತ್ ಗೆಲವು ಪಡೆದಿದ್ದಾರೆ.


Click it and Unblock the Notifications








