ಮಾರುತಿ ಡೀಸೆಲ್ ಕಾರುಗಳಿನ್ನು ದುಬಾರಿ

ಮಾರುತಿ ಡೀಸೆಲ್ ಕಾರುಗಳಲ್ಲಿ ರಿಟ್ಜ್ ದರ ಕೊಂಚ ಹೆಚ್ಚಾಗಿದೆ. ಅಂದರೆ ರಿಟ್ಜ್ ದರ 2 ಸಾವಿರ ರು. ಹೆಚ್ಚಾಗಿದೆ. ಆದರೆ ಎಸ್ಎಕ್ಸ್4 ಡೀಸೆಲ್ ಕಾರು ದರ ಮಾತ್ರ 10 ಸಾವಿರ ರು. ದುಬಾರಿಯಾಗಿದೆ. ಬಿಡಿಭಾಗ ವೆಚ್ಚ ಜಪಾನಿನ ಯೆನ್ ಏರಿಳಿತ ಇತ್ಯಾದಿಗಳು ಕಾರು ದರ ಹೆಚ್ಚಿಸಲು ಪ್ರಮುಖ ಕಾರಣವಾಗಿದೆ.
"ಬಿಡಿಭಾಗ ವೆಚ್ಚ ಹೆಚ್ಚಾಗಿರುವುದು ಮತ್ತು ಜಪಾನಿನ ಕರೆನ್ಸೆ ಯೆನ್ ಬೆಲೆಯೇರಿಕೆಯಿಂದಾಗಿ ಆಮದು ದುಬಾರಿಯಾಗಿದೆ. ಈ ಹಿನ್ನಲೆಯಲ್ಲಿ ಡೀಸೆಲ್ ಕಾರುಗಳ ದರ ಹೆಚ್ಚಳ ಮಾಡಲಾಗಿದೆ" ಎಂದು ಮಾರುತಿ ಸುಜುಕಿ ವಕ್ತಾರರು ಹೇಳಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಮಾರುತಿ ಸುಜುಕಿ ದೇಶದ ಕಾರು ಮಾರುಕಟ್ಟೆಯಲ್ಲಿ ಅನಾಭಿಷಿಕ್ತ ರಾಜನಾಗಿ ಮೆರೆಯುತ್ತಿದೆ. ಮಾರುತಿ ದರ ಹೆಚ್ಚಿಸಿದರೆ ಉಳಿದ ಕಂಪನಿಗಳು ಕಾರು ದರ ಹೆಚ್ಚಿಸುವುದು ಸಾಮಾನ್ಯ. ಹೀಗಾಗಿ ಮುಂದಿನ ದಿನಗಳಲ್ಲಿ ಹ್ಯುಂಡೈ ಮತ್ತು ಟೊಯೊಟಾ ಕೂಡ ಕಾರು ದರ ಹೆಚ್ಚಿಸುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








