10 ಲಕ್ಷ ಜನರಿಗೆ ಡ್ರೈವಿಂಗ್ ಕಲಿಸಿದ ಮಾರುತಿ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಿಷನ್ ಅಥವಾ ನ್ಯಾಷನಲ್ ರೋಡ್ ಸೇಫ್ಟಿ ಮಿಷನ್(ಎನ್ಆರ್ಎಸ್ಎಂ) ಮೂಲಕ 2008ರಲ್ಲಿ ಮಾರುತಿ ಸುಜುಕಿ ರಸ್ತೆ ಸುರಕ್ಷತಾ ಅಭಿಯಾನ ಆರಂಭಿಸಿತ್ತು. ಈ ಕಾರ್ಯಕ್ರಮದ ಮೂಲಕ ಸುಮಾರು 5 ಲಕ್ಷ ಜನರಿಗೆ ತರಬೇತಿ ನೀಡಿತ್ತು. ಡ್ರೈವಿಂಗ್ ಸ್ಕೂಲ್ ಸೇರಿದಂತೆ ಕಂಪನಿಯು ಒಟ್ಟಾರೆ ಸುಮಾರು ಹತ್ತು ಲಕ್ಷ ಜನರಿಗೆ ತರಬೇತಿ ನೀಡಿದೆ.
ಇದೀಗ ಕಂಪನಿಯು ಮುಂದಿನ 2-3 ವರ್ಷಗಳಲ್ಲಿ ತನ್ನ ಡ್ರೈವಿಂಗ್ ಸ್ಕೂಲ್ ಸಂಖ್ಯೆಯನ್ನು 400ಕ್ಕೆ ಹೆಚ್ಚಿಸಲು ಯೋಜಿಸಿದೆ. "ಇಲ್ಲಿವರೆಗೆ ನಾವು ಸುಮಾರು 10 ಲಕ್ಷ ಜನರಿಗೆ ತರಬೇತಿ ನೀಡಿದ್ದೇವೆ. ಇನ್ನು ನಾವು ಡ್ರೈವಿಂಗ್ ಸ್ಕೂಲ್ ನೆಟ್ ವರ್ಕ್ ನ್ನು ಎರಡು ಪಟ್ಟು ವಿಸ್ತರಿಸಲಿದ್ದೇವೆ" ಎಂದು ಮಾರುತಿ ಸುಜುಕಿ ಮಾರಾಟ ವಿಭಾಗದ ಪ್ರಧಾನ ಕಾರ್ಯನಿರ್ವಹಣಾಧಿಕಾರಿ ಮಾಯಂಕ್ ಪಾರೇಕ್ ಹೇಳಿದ್ದಾರೆ.
ಮಾರುತಿ ಸುಜುಕಿ ಈಗ 6 ಡ್ರೈವಿಂಗ್ ಇನ್ಶುಟ್ಯೂಟ್ ಮತ್ತು ಟ್ರಾಫಿಕ್ ರಿಸರ್ಚ್ ಸಂಸ್ಥೆಗಳನ್ನು ಹೊಂದಿದೆ. ಉಳಿದಂತೆ 192 ಡ್ರೈವಿಂಗ್ ಸ್ಕೂಲ್ ಹೊಂದಿದೆ. ರಸ್ತೆ ಸುರಕ್ಷತಾ ಸಪ್ತಾಹ ಆಯೋಜಿಸಲು ಕಂಪನಿಯು ವಿವಿಧ ಸರಕಾರಗಳೊಂದಿಗೆ ಮಾತುಕತೆ ನಡೆಸುತ್ತಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








