ಭಾರತದ ವಾಹನ ಗುಣಮಟ್ಟ ತೃಪ್ತಿದಾಯಕ: ಸಮೀಕ್ಷೆ

New-Vehicle Quality in India Improves
ವಾಹನ ಗುಣಮಟ್ಟ ಸಮಸ್ಯೆ ಕುರಿತಾದ ವಾಹನ ಮಾಲಿಕರ ದೂರು 2010ಕ್ಕೆ ಹೋಲಿಸಿದರೆ ಈ ವರ್ಷ ಶೇಕಡ 16ರಷ್ಟು ಕಡಿಮೆಯಾಗಿದೆ. ಜೆಡಿ ಪವರ್ ಏಷ್ಯಾ ಪೆಸಿಫಿಕ್ ನಡೆಸಿದ 2011ರ ಗುಣಮಟ್ಟ ಸಮಸ್ಯೆ(ಐಕ್ಯೂಎಸ್) ಕುರಿತಾದ ಸಮೀಕ್ಷೆ ಈ ವಿಷಯ ಬಹಿರಂಗಪಡಿಸಿದೆ.

ವಾಹನ ಮಾಲಿಕರು ವಾಹನ ಖರೀದಿಸಿದ ಮೊದಲ ಎರಡರಿಂದ ಆರು ತಿಂಗಳಲ್ಲಿ ಉಂಟಾಗುವ ತಾಂತ್ರಿಕ ಸಮಸ್ಯೆಗಳನ್ನು ಸಮೀಕ್ಷೆಯಲ್ಲಿ ಪರಿಶೀಲಿಸಲಾಗಿತ್ತು. ಸುಮಾರು 8 ವಾಹನ ವಿಭಾಗದಲ್ಲಿ 200 ಸಮಸ್ಯೆಗಳ ಮಾನದಂಡವನ್ನಿಟ್ಟುಕೊಂಡು ಸಮೀಕ್ಷೆ ನಡೆಸಲಾಗಿದೆ.

ಎಂಜಿನ್ ಮತ್ತು ಟ್ರಾನ್ಸ್ ಮಿಷನ್, ಎಕ್ಸ್ ಟೀರಿಯರ್, ಡ್ರೈವಿಂಗ್ ಅನುಭವ, ಫೀಚರ್ಸ್, ಕಂಟ್ರೊಲ್ಸ್, ಇಂಟಿರಿಯರ್, ಸೀಟ್, ಆಡಿಯೊ ಮತ್ತು ಮನರಂಜನೆ, ನ್ಯಾವಿಗೇಷನ್ ಮುಂತಾದ ವಿಭಾಗದಲ್ಲಿ ಉಂಟಾಗುವ ಸಮಸ್ಯೆಗಳನ್ನು ಅಧ್ಯಯನ ಮಾಡಲಾಗಿದೆ.

ಈ ಎಲ್ಲ ಸಮಸ್ಯೆಗಳನ್ನು ಹುಡುಕಿ ನಡೆಸಿದ ಸಮೀಕ್ಷೆಯಲ್ಲಿ ವಾಹನ ಗುಣಮಟ್ಟ ಹೆಚ್ಚಾಗಿರುವುದು ತಿಳಿದುಬಂದಿದೆ. 2010ರ ವಾಹನ ಗುಣಮಟ್ಟಕ್ಕೆ ಹೋಲಿಸಿದರೆ ಆಶಾದಾಯಕವಾಗಿ ಶೇಕಡ ಹದಿನಾರರಷ್ಟು ಗುಣಮಟ್ಟ ಹೆಚ್ಚಾಗಿದೆ.

"ಕಳೆದ ಕೆಲವು ವರ್ಷಗಳಿಂದ ಭಾರತದ ವಾಹನಗಳ ಗುಣಮಟ್ಟ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ" ಎಂದು ಜೆಡಿ ಪವರ್ ನಿರ್ದೇಶಕ ಮೊಹಿತ್ ಅರೊರಾ ಹೇಳಿದ್ದಾರೆ.

More from DriveSpark

Article Published On: Wednesday, November 30, 2011, 15:08 [IST]
English summary
Initial quality problems reported by new-vehicle owners in India has decreased by 16 per cent in 2011 compared with 2010 according to the JD Power Asia Pacific 2011 India Initial Quality Study(IQS)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+