ಸ್ಯಾನ್ ಸ್ಟ್ರೋಮ್: ಗೋವಾ ಕಾರಿಗೆ ಸುಸ್ವಾಗತ

New San Storm Coming Your Way
ಕನ್ವರ್ಟಿಬಲ್ ಅಥವಾ ಮೇಲ್ಚಾವಣಿ ಮಡುಚಬಹುದಾದ ಕಾರುಗಳೆಂದರೆ ಎಲ್ಲರಿಗೂ ಇಷ್ಟ. ಬೇಕಾದಲ್ಲಿ ಮೇಲ್ಚಾವಣಿ ಮಡುಚಿಕೊಂಡು ಗಾಳಿಗೆ ಮೈತೆರೆದು ಮಾಡುತ್ತ ಪ್ರಯಾಣಿಸುವ ಮಜಾನೇ ಬೇರೆ. ಆದರೆ ಇಲ್ಲಿವರೆಗೆ ಅಂತಹ ಕಾರುಗಳಿಗೆ ನಾವು ವಿದೇಶಿ ಕಂಪನಿಗಳನ್ನೇ ಅವಲಂಬಿಸಿದ್ದೇವು.

ಬೇಜಾರು ಬೇಡ. ಗೋವಾದ ಕಂಪನಿಯೊಂದು ಕನ್ವರ್ಟಿಬಲ್ ಕಾರನ್ನು ಉತ್ಪಾದಿಸುತ್ತಿದೆ. ಇದು ಚಿಕ್ಕ ಕಂಪನಿಯಾಗಿರುವ ಕಾರಣ ತಿಂಗಳಿಗೆ ಒಂದೆರಡುಮೂರು ಕಾರು ಮಾತ್ರ ಉತ್ಪಾದಿಸುತ್ತಿದೆ. ಸದ್ಯ ಕಂಪನಿ ಹೊರತಂದಿರುವ ಕಾರಿನ ಹೆಸರು ಸ್ಯಾನ್ ಸ್ಟ್ರೋಮ್. ಗಾಳಿ ನಿಮ್ಮ ಮುಖಕ್ಕೆ ಬೀಸುವುದು ಎಂದು ಈ ಹೆಸರಿನ ಅರ್ಥ.

ಸ್ಟ್ರೋಮ್ ಅಂದರೆ ಎರಡು ಸೀಟಿನ ಕಾರು. ಇದು ಅಗ್ಗದ ಕನ್ವರ್ಟಿಬಲ್ ಕಾರು ಕೂಡ ಹೌದು. ಇದರ ದರ ಸುಮಾರು 6 ಲಕ್ಷ ರುಪಾಯಿ. ವಿದೇಶಿ ಕಂಪನಿಗಳ ಕನ್ವರ್ಟಿಬಲ್ ಕಾರು ದರ ಸುಮಾರು 20 ಲಕ್ಷ ರು. ಆಸುಪಾಸಿನಲ್ಲಿದೆ. ನಮ್ಮ ದೇಶದಲ್ಲಿಯೇ ಅಗ್ಗದ ದರದ ಕನ್ವರ್ಟಿಬಲ್ ಕಾರು ದೊರಕುವಾಗ ವಿದೇಶಿ ಕಾರುಗಳ ಮೋಹ ನಮಗೆ ಏತಕ್ಕೆ ಅಲ್ಲವೇ?

ಈ ಕಾರು ರೆನಾಲ್ಟಿನ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಸ್ಯಾನ್ ಸ್ಟ್ರೋಮ್ ಹೆಚ್ಚು ಶಕ್ತಿಶಾಲಿಯಾಗಲಿದೆಯಂತೆ. ಕಂಪನಿಯು ಈ ಕಾರಿಗೆ 1.3 ಲೀಟರ್ ಎಂಜಿನ್ ಅಳವಡಿಸುತ್ತಿದೆಯಂತೆ. ಈ ಕಾರಿಗೆ ಬಾಡಿ ಪ್ಯಾನೆಲ್ ನ್ನು ಬೆಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ. ಗೋವಾದಲ್ಲಿ ಈ ಕಾರನ್ನು ಸಂಪೂರ್ಣವಾಗಿ ಜೋಡಿಸಲಾಗುತ್ತಿದೆ.

ಸದ್ಯಕ್ಕೆ ಈ ಕಾರನ್ನು ಗೋವಾದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಕಂಪನಿಯು ದೇಶದಲ್ಲಿ ಹೆಚ್ಚು ಶೋರೂಂ ತೆರೆದರೆ ಸ್ಯಾನ್ ಮೋಟರ್ಸ್ ಹೆಚ್ಚು ಜನಪ್ರಿಯವಾದೀತು. ನಮ್ಮ ದೇಶದ ಕಂಪನಿ ಸದ್ದಿಲ್ಲದೇ ಬೆರಳೆಣಿಕೆಯ ಕನ್ವರ್ಟಿಬಲ್ ಕಾರನ್ನು ತಯಾರಿಸುತ್ತಿದೆ ಎಂದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

More from DriveSpark

Article Published On: Saturday, December 10, 2011, 16:57 [IST]
English summary
San Motors a Goa based car builder is possibly the only local manufacturer of a convertible. San Motors is a small company that builds about two to three cars per month. The Storm is a two seater convertible with a soft top roof. It is priced at just under Rs.6 lakhs and is currently powered by a 1.2-litre petrol engine sourced from Renault.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+