ರಾ.ಒನ್ ನಟನೆಯಿಂದ ರಜನಿಕಾಂತ್ ಗೆ ದಕ್ಕಿದ್ದೇನು?

ರಾ.ಒನ್ ಸಿನಿಮಾದಲ್ಲಿ ಸಹನಟರಾಗಿ ಕಾಣಿಸಿಕೊಂಡ ಸೂಪರ್ ಸ್ಟಾರ್ ರಜನಿಕಾಂತ್, ಅನುಭವ್ ಸಿನ್ಹಾ ಮತ್ತು ಅರ್ಜುನ್ ರಾಂಪಾಲ್ ರಿಗೆ ಭರ್ಜರಿ ಉಡುಗೊರೆಯನ್ನೇ ಶಾರೂಖ್ ನೀಡಲಿದ್ದಾರಂತೆ. ಇವರೆಲ್ಲರಿಗೆ ನೂತನ ಬಿಎಂಡಬ್ಲ್ಯು 7 ಸೀರಿಸ್ ಕಾರು ನೀಡಿ ಶಾರೂಖ್ ಕೃತಜ್ಞತೆ ಸೂಚಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಈ ಕಾರಿನ ದರ ಒಂದು ಕೋಟಿ ರು. ಆಸುಪಾಸಿನಲ್ಲಿದೆ.
ಶಾರೂಖ್ ತನ್ನ ಸಹನಟರಿಗೆ ಮತ್ತು ನಿರ್ದೇಶಕರಿಗೆ ಕಾರು ಉಡುಗೊರೆ ನೀಡುವುದು ಇದು ಮೊದಲಲ್ಲ. ಮೊಹಿ ಹೂ ನಾ ಸಿನಿಮಾ ನಿರ್ದೇಶಿಸಿದ ಫಾರಹಾ ಖಾನ್ ಗೆ ಹ್ಯುಂಡೈ ಟೆರ್ರಾಕಾನ್ ಎಂಬ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ನೀಡಿದ್ದರು. ಓಂ ಶಾಂತಿ ನಿರ್ದೇಶನಕ್ಕೂ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಕಾರು ಉಡುಗೊರೆ ನೀಡಿದ್ದಾರೆ.
ಆದರೆ ತನ್ನ ಸಹನಟರಿಗೆ ಬಿಎಂಡಬ್ಲ್ಯು ಕಾರು ನೀಡುವ ಕುರಿತು ಶಾರೂಖ್ ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಮುಂಬೈನ ಬಿಎಂಡಬ್ಲ್ಯು ಡೀಲರ್ ಈಗಾಗಲೇ ಬಿಎಂಡಬ್ಲ್ಯು 7 ಸೀರಿಸ್ ಕಾರಿಗಾಗಿ 5 ಬುಕ್ಕಿಂಗ್ ಪಡೆದಿದ್ದಾರೆ. ಈ ಕಾರುಗಳೆಲ್ಲ ಸಹನಟರಿಗೆ ಉಡುಗೊರೆ ನೀಡಲೆಂದು ಮೂಲಗಳು ಹೇಳಿವೆ. ( ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications








